Thalapathy Vijay: ದಳಪತಿ ವಿಜಯ್ ಕೆಲ ದಿನಗಳ ಹಿಂದಷ್ಟೆ ತಮ್ಮ ಕೊನೆಯ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಬಾಲಿವುಡ್ನಿಂದ ಬರಲಿದ್ದಾರೆ ವಿಲನ್.
ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ಕೆಲವೇ ವಾರಗಳ ಹಿಂದೆ ತೆರೆಗೆ ಬಂದಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಸಿನಿಮಾ ಹೇಗೆ ಇದ್ದರೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶವನ್ನೇ ಕಂಡಿತು ‘ಗೋಟ್’ ಸಿನಿಮಾ. ಇದರ ಬೆನ್ನಲ್ಲೆ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದ ಘೋಷಣೆ ಆಗಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಲಿರುವ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದು, ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಸಿನಿಮಾಕ್ಕೆ ಬಾಲಿವುಡ್ನಿಂದ ಬರಲಿದ್ದಾರೆ ವಿಲನ್.
90ರ ದಶಕದಲ್ಲಿ ನಾಯಕ ನಟನಾಗಿ ಮಿಂಚಿದ್ದ ಬಾಬಿ ಡಿಯೋಲ್ ಆ ನಂತರ ಅವಕಾಶಗಳನ್ನು ಕಳೆದುಕೊಂಡಿದ್ದರು. ಇದೀಗ ವಿಲನ್ ಆಗಿ ವೃತ್ತಿಯನ್ನು ಮತ್ತೆ ಪ್ರಾರಂಭಿಸಿದ್ದು, ನಾಯಕನಾಗಿ ಗಳಿಸಿದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ವಿಲನ್ ಆಗಿ ಪಡೆಯುತ್ತಿದ್ದಾರೆ ಬಾಬಿ. ‘ಅನಿಮಲ್’ ಸಿನಿಮಾದ ಬಳಿಕವಂತೂ ವಿಲನ್ ಬಾಬಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ವಿಜಯ್ರ ಕೊನೆಯ ಸಿನಿಮಾದಲ್ಲಿಯೂ ಬಾಬಿ ವಿಲನ್ ಆಗಿ ನಟಿಸಲಿದ್ದಾರೆ..