Wednesday, April 30, 2025
30.3 C
Bengaluru
LIVE
ಮನೆ#Exclusive Newsಕೊಲೆ ಅಪರಾಧಿಗಳೀಗ ಕೃಷಿಕರು!

ಕೊಲೆ ಅಪರಾಧಿಗಳೀಗ ಕೃಷಿಕರು!

ತಿರುವನಂತಪುರ: ತಿರುವನಂತಪುರದಿಂದ 50 ಕಿ.ಮೀ. ದೂರದ ನೆಟ್ಟುಕಾಲಕ್ಕೇರಿಯಲ್ಲಿರುವ ಬಯಲು ಬಂದೀಖಾನೆ ಮತ್ತು ಸುಧಾರಣಾ ಮಂದಿರದ ಪುರುಷ ಕೈದಿಗಳಿಗೆ ಈಗ ಬಿಡುವಿಲ್ಲದ ದುಡಿಮೆ. ಓಣಂ ಸಮೀಪಿಸುತ್ತಿರುವ ಕಾರಣ, ಅವರಿಗೆ ಕೈತುಂಬಾ ಕೆಲಸ, ಗಳಿಕೆಯ ಅವಕಾಶ.
ಶಿಕ್ಷೆಯ ಅವಧಿ ಮುಗಿದ ಮೇಲೆ ಜೈಲಿನಿಂದ ಬಿಡುಗಡೆಗೊಂಡ ನಂತರ, ಸ್ವಂತ ಉದ್ಯೋಗ ಕಂಡುಕೊಳ್ಳಲು ಅನುವಾಗುವಂತೆ ಇಲ್ಲಿನ ಕೈದಿಗಳಿಗೆ ವಿವಿಧ ಕೌಶಲಗಳನ್ನು ಕಲಿಸಲಾಗು ತ್ತಿದೆ. ಬಿಡುಗಡೆಗೊಂಡ ಕೈದಿಗಳ ಪುನರ್ವಸತಿಗಾಗಿ ಕೈಗೊಂಡಿರುವ ಈ
ಪ್ರಾಯೋಗಿಕ ಕ್ರಮಗಳತ್ತಲೇ ಈಗ ಎಲ್ಲ ದೃಷ್ಟಿ ನೆಟ್ಟಿದೆ.
ನೆಟ್ಟುಕಾಲಕ್ಕೇರಿಯಲ್ಲಿನ 472 ಎಕರೆ ಪ್ರದೇಶವನ್ನು ವಿವಿಧ ತರಬೇತಿ ನೀಡುವುದಕ್ಕೆ ಅಭಿವೃದ್ಧಿಪಡಿಸಲಾಗಿದೆ. ಕೈದಿಗಳು ರಬ್ಬರ್ ಕೃಷಿ, ಹೈನುಗಾರಿಕೆ, ಜೇನು ಸಾಕಣೆ ಸೇರಿದಂತೆ ವಿವಿಧ
ಕಾರ್ಯಗಳಲ್ಲಿ ತೊಡಗಿದ್ದಾರೆ.
ತಿಳಿದೊ ಇಲ್ಲವೇ ಆಕಸ್ಮಿಕವಾಗಿ- ಯೋ ವ್ಯಕ್ತಿಯನ್ನು ಅಥವಾ ಹಲವರನ್ನು ಕೊಲೆ ಮಾಡಿದ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರು ಈಗ ಕೃಷಿಕರಾಗಿದ್ದು, ಶ್ರಮವಹಿಸಿ ದುಡಿಯುತ್ತಿದ್ದಾರೆ. 20 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಶಿಕ್ಷೆ ಅನುಭವಿಸುತ್ತಿರುವವರೂ ಇದ್ದಾರೆ.
ಪರಿಶ್ರಮದಿಂದ ಕೃಷಿ ಉತ್ಪನ್ನಗಳು ಕೈಗೆ ಬರುತ್ತಿರುವ ಕಾರಣ ಇಲ್ಲಿನ ಕೈದಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
‘ಇದೊಂದು ರೀತಿ ಕೃಷಿ ಚಿಕಿತ್ಸೆ. ಸಸ್ಯವೊಂದನ್ನು ಬೆಳೆಸುವುದು. ಅದರಲ್ಲಿ ಹೂವರಳಿ, ನಂತರ ಫಲ ಬಿಟ್ಟಾಗ ಕೃಷಿ ಮಾಡಿದ ವ್ಯಕ್ತಿಗೆ ಸಿಗುವ
ಅನಂದ, ಅವರಲ್ಲಿ ಕಂಡುಬರುವ ಸಕಾರಾತ್ಮಕ ಬದಲಾವಣೆ ಅನನ್ಯ’ ಎಂದು బయలు ಬಂದೀಖಾನೆ ಪ್ರಭಾರ ಸೂಪರಿಂಟೆಂಡೆಂಟ್ ರಾಜೇಶ್ ಕುಮಾರ್ ಹೇಳುತ್ತಾರೆ.
“ఓణం ಹಬ್ಬದ ಮಾರುಕಟ್ಟೆ ವೇಳೆಯ ದೃಷ್ಟಿಯಲ್ಲಿಟ್ಟುಕೊಂ- ಡೇ ಇಲ್ಲಿ ನಾವು ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ಹಬ್ಬ ಆರಂಭಕ್ಕೂ ಎರಡು ದಿನಗಳ ಮುಂಚೆ ಇವುಗಳನ್ನು ಪೂ ಜಾ ಪುರ೦ನಲ್ಲಿರುವ ನಮ್ಮ ಕೇಂದ್ರ ಕಚೇರಿ ಬಳಿಯ ಮಾರುಕಟ್ಟೆಗೆ ಕಳಿಸುತ್ತೇವೆ” ಎಂದು బయలు ಬಂದೀಖಾನೆಯ ಕೃಷಿ ಅಧಿಕಾರಿ ಅಜಿತ್ ಸಿಂಗ್ ಹೇಳುತ್ತಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments