ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಣ್ಣೂರಿನ ಥಣಿಸಂದ್ರದಲ್ಲಿ ನಡೆದಿದೆ. ಅಯ್ಯಪ್ಪ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಬಿಎಸ್ ಸಿ ಎರಡನೇ ವರ್ಷದಲ್ಲಿ ವ್ಯಾಸಾಂಗ ಮಾಡ್ತಿದ್ದ. ತಂದೆ ಆರು ವರ್ಷದ ಹಿಂದೆ ಮೃತಪಟ್ಟಿದ್ರು, ಅಕ್ಕನಿಗೆ ಮದಿವೆಯಾಗಿ ಗಂಡನ ಮನೆ ಸೇರಿದ್ರು ಹಾಗೂ ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ತಾಯಿಯನ್ನ ಪದೇ ಪದೇ ಬೈಕ್ ಕೊಡಿಸುವಂತೆ ಕೇಳ್ತಿದ್ದ, ಆದ್ರೆ ಬೈಕ್ ಕೊಡಿಸಲು ಬಡತನ ಅಡ್ಡಿಯಾಗಿತ್ತು ಇದರಿಂದ ಸ್ವಲ್ಪ ದಿನ ಕಾಯುವಂತೆ ತಾಯಿ ಹೇಳಿದ್ದರಂತೆ. ಅಲ್ಲದೇ ಬೈಕ್ ಕೊಡಿಸಲು ತಾಯಿ 50 ಸಾವಿರ ಸಾಲ ಮಾಡಿ, ಎರಡು ದಿನದಲ್ಲಿ ಬೈಕ್ ಕೊಡಿಸಲು ನಿರ್ಧರಿಸಿದ್ದಳು, ಅಷ್ಟರಲ್ಲಾಗಲೇ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. ನಿನ್ನೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋಗಿದ್ದ ತಾಯಿ 4.30 ಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,
ಮೃತದೇಹ ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ….