ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಮಲೈರಾ ಅರೋರಾ ಅವರ ತಂದೆ ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ಅರ್ಜುನ್ ಕಪೂರ್ ಸೇರಿದಂತೆ ಅನನ್ಯಾ ಪಾಂಡೆ, ಸಲೀಂ ಖಾನ್, ಅರ್ಬಾಜ್ ಖಾನ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಮುಂತಾದ ಸೆಲೆಬ್ರಿಟಿಗಳು ಕೂಡ ಬಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಖ್ಯಾತ ನಟಿ ಮಲೈಕಾ ಅರೋರಾ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಅನೇಕ ಸೆಲೆಬ್ರಿಟಿಗಳು ಅನಿಲ್ ಅರೋರಾ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಮಲೈಕಾ ಅರೋರಾ ಅವರ ಮಾಜಿ ಪ್ರಿಯಕರ ಅರ್ಜುನ್ ಕಪೂರ್ ಕೂಡ ಬಂದು ಅನಿಲ್ ಅರೋರಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅರ್ಜುನ್ ಕಪೂರ್ ಅವರು ಆಗಮಿಸಿದ ವಿಡಿಯೋ ವೈರಲ್ ಆಗಿದೆ.
ಮಲೈಕಾ ಅರೋರಾ ಅವರು ಬಹುಬೇಡಿಕೆಯ ನಟಿಯಾಗಿದ್ದಾರೆ. ಖುಷಿ ಖುಷಿಯಾಗಿ ಫಾರಿನ್ ಟ್ರಿಪ್ ಮಾಡುತ್ತಿದ್ದ ಅವರಿಗೆ ತಂದೆಯ ಸಾವಿನ ವಿಷಯ ತಿಳಿದು ಶಾಕ್ ಆಗಿದೆ. ತಂದೆಯ ಮನೆಗೆ ಮಲೈಕಾ ಅವರು ಓಡೋಡಿ ಬಂದಿದ್ದಾರೆ. ಬಳಿಕ ಅರ್ಜುನ್ ಕಪುರ್ ಕೂಡ ಬಂದಿದ್ದಾರೆ. ಕೆಲವೇ ತಿಂಗಳ ಹಿಂದೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಬ್ರೇಕಪ್ ಮಾಡಿಕೊಂಡರು.
https://www.instagram.com/reel/C_xQaoDsl_5/?igsh=MmhraGVwaWNpbDA2