ಕೊರೊನಾ ವೈರಸ್.. ಈಗಾಗಲೇ ಇದಕ್ಕೆ ಜನ ತತ್ತರಿಸಿಹೋಗಿದ್ದಾರೆ.. ಕೋವಿಡ್ ಅನ್ನೋ ಮಹಾಮಾರಿ ವಕ್ಕರಿಸಿದಾಗಲೇ ಅದೆಷ್ಟು ಕುಟುಂಬಗಳು ಬೀದಿ ಪಾಲಾದವು..ಫೈನಾನಶಿಯಲ್ ಕ್ರೈಸಿಸ್ ಎದುರಾಗಿ ಅದೆಷ್ಟು ಜನ ಕೆಲಸ ಕಳೆದುಕೊಂಡ್ರು..ವ್ಯಾಪಾರವಿಲ್ಲದೇ ವಹಿವಾಟಿಲ್ಲದೇ ಕಂಗಾಲದವರೆಷ್ಟು..ಒಂದಾ ಎರಡಾ..ಕೋವಿಡ್ ಮಹಾಮಾರಿಯ ಎಫೆಕ್ಟ್ ನಿಂದ ಚೇತರಿಸಿಕೊಳ್ಳೋ ಮುನ್ನವೇ ನಮ್ಮ ಮನೆಯ ಬಾಗಿಲು ಬಡಿಯುತ್ತಿರೋದು ಜೆಎನ್ 1 ಎಂಬ ಮತ್ತೊಂದು ಅವತಾರಿ ವೈರಸ್..
ಹೌದು..ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ತನ್ನ ಆರ್ಭಟವನ್ನ ಕೊಂಚ ತಗ್ಗಿಸಿಕೊಂಡು ಸೈಲೆಂಟ್ ಆಗಿದೆ. ಅದರ ಬೆನ್ನಲ್ಲೇ ಇದೀಗ ಜೆಎನ್ 1 ಕುಣಿತ ಆರಂಭಿಸಿದೆ. ಈಗಾಗಲೇ ಸಾಕಷ್ಟು ಯಮಯಾತನೆ ಅನುಭವಿಸಿ ಸಹಜ ಜೀವನಕ್ಕೆ ಜನ ಮರಳಬೇಕು ಅನ್ನೋವಷ್ಟರಲ್ಲಿ ಇದೀಗ ಜೆಎನ್ 1 ವೈರಸ್ ಕಾಣಿಸಿಕೊಂಡಿದೆ. ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎರಡರ ಜೊತೆಗೀಗ ಮತ್ತೊಂದು ವೈರಸ್ ಎದುರಾಗಲಿದೆ ಅನ್ನೋ ಸುದ್ದಿಯನ್ನ ಯುಎಸ್ ವಿಜ್ಞಾನಿಗಳು ಹೊರ ಹಾಕುವ ಮೂಲಕ ಮತ್ತೊಂದು ಸುತ್ತಿಗೆ ಆತಂಕ ಸೃಷ್ಟಿಸಿದ್ದಾರೆ.

ಅದು ಡೆಡ್ಲಿ ಝೋಂಭೀ ವೈರಸ್.. ಈ ವೈರಸ್ ಕೂಡ ಮಾನವನ ಶರೀರವನ್ನ ಭಾದಿಸುವ ಶಕ್ತಿ ಹೊಂದಿದೆ. ವೈರಸ್ ಅಟ್ಯಾಕ್ ಆದ್ರೆ ಪ್ರಸ್ತುತ ಸ್ಥಿತಿಯಲ್ಲಿ ಔಷಧವಿಲ್ಲ ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ.. ಇಷ್ಟಕ್ಕೂ ಈ ವೈರಸ್ ಹರಡೋದಾದ್ರೂ ಹೇಗೆ..? ಯಾವ ಮೂಲಕ ಝೋಂಭಿ ನಮ್ಮ ದೇಹ ಸೇರುತ್ತೆ. ದೇಹ ಸೇರಿದ ವೈರಸ್ ನಿಂದಾಗಿ ಮನುಷ್ಯ ಹೇಗೆ ಕೃಶವಾಗಿ ಪ್ರಾಣ ಬಿಡ್ತಾನೆ ಅನ್ನೋ ಭಯಂಕರ ಸತ್ಯವನ್ನ ಯೂನೈಟೆಡ್ ಸ್ಟೇಟ್ಸ್ ನ ಕ್ರಾನಿಕ್ ವೇಸ್ಟಿಂಗ್ ಡಿಸೀಸ್ (ಸಿ ಡಬ್ಲ್ಯೂಡಿ) ಸಂಶೋಧಕರು ತಿಳಿಸಿದ್ದಾರೆ.
ಅಂದಾಗೆ ಈ ವೈರಸ್ ಗೆ ಝೋಂಭೀ ಡೀರ್ ಡೀಸಸ್ ಎಂದು ಸಧ್ಯಕ್ಕೆ ನಾಮಕರಣ ಮಾಡಲಾಗಿದೆ. ಮೊದಲಿಗೆ ನವೆಂಬರ್ ತಿಂಗಳಿನ ಅಂಚಲ್ಲಿ ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿ ಕಾಣಿಸಿಕೊಂಡಿದೆ. ವಿಜ್ಞಾನಿಗಳು ಸುಮಾರು ಎಂಟುನೂರಕ್ಕೂ ಹೆಚ್ಚು ಸ್ಯಾಂಪಲ್ಗಳನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಆ ಪರೀಕ್ಷೆ ಮೂಲಕ, ಜಿಂಕೆಗಳು, ಕಡವೆಗಳು, ಸಾರಂಗಳಲ್ಲಿ ಕಾಣಿಸಿಕೊಂಡಿದೆ. ಇವುಗಳ ಜೊಲ್ಲಿನ ಮೂಲಕ ಈ ವೈರಸ್ ಹರಡುತ್ತೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ವೈರಸ್ ಅನ್ನು ವಿಜ್ಞಾನಿಗಳು ನಿಧಾನವಾಗಿ ಹರಡುವ ವಿಪತ್ತು ಎಂದು ಕರೆದಿದ್ದಾರೆ. ಅಲ್ಲದೇ ಯುನೈಟೆಡ್ ಸ್ಟೇಟ್ಸ್ ಸರ್ಕಾರಕ್ಕೆ ರೋಗ ನಿಯಂತ್ರಣಕ್ಕೆ ತಯಾರಿ ಮಾಡಿಕೊಳ್ಳಿ ಅಂತಲೂ ಸೂಚನೆ ನೀಡಿದ್ದಾರೆ. ಈಗಾಗಲೇ ಯೂನೈಟೆಡ್ ಸ್ಟೇಟ್ಸ್ ನ 31 ರಾಜ್ಯಗಳಲ್ಲಿ ಈ ರೋಗದ ಲಕ್ಷಣಗಳು ಅಲ್ಲಲ್ಲಿ ಕಂಡು ಬಂದಿರುವ ವರದಿಯಾಗಿದೆ. ಇನ್ನು ಬ್ರಿಟನ್ ನಲ್ಲಿ ಈ ಹಿಂದೆ ಹುಚ್ಚು ಹಸುವಿನ ರೋಗ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಆ ರೋಗ ಎಷ್ಟು ಸ್ಪೀಡಾಗಿ ಹರಡಿತ್ತು ಅನ್ನೋದು ಗೊತ್ತಿದೆ. ಹೀಗಾಗಿ ಜೋಂಭಿ ಡೀರ್ ಡೀಸಿಸ್ ಕೂಡ ಬಲು ಬೇಗನೆ ವ್ಯಾಪಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಅತ್ಯಗತ್ಯ ಎಂದು ಸಿಡಬ್ಲ್ಯೂಡಿ ಸಂಶೋಧಕ ಕೋರಿ ಅ್ಯಂಡರ್ ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವೈರಸ್ ಸೋಂಕಿತ ಪ್ರಾಣಿಗಳ ಜೊಲ್ಲು ನೆಲದ ಮೇಲೆ ಬೀಳುವುದರಿಂದ ಹರಡುತ್ತದೆ. ಮಣ್ಣು ತರಕಾರಿ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಮೊದಲಿಗೆ ಈ ರೋಗವು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಿ ಬಳಿಕ ನಾವು ತಿನ್ನುವ ಪ್ರಾಣಿಗಳ ಮಾಂಸದ ಮೂಲಕವೂ ಸೋಂಕು ಹರಡಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಡಾ. ಕೋರಿ ಅ್ಯಂಡರ್ ಸನ್ ಸಂಶೋದಕ
ಏನಿದು ಝೋಂಭಿ ಡೀರ್ ಡೀಸಿಸ್?
ಈ ಝೋಂಭೀ ಡೀರ್ ಡಿಸೀಸ್ ಒಂದು ಮಾರಣಾಂತಿಕ ಮತ್ತು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಅಸಮರ್ಪಕ ಪ್ರೋಟಿನ್ ನಿಂದ ಉಂಟಾಗುತ್ತದೆ. ಈ ವೈರಸ್ ಪ್ರಾಣಿಗಳಿಗೆ ಆಗಲಿ ಮತ್ತು ಮನುಷ್ಯರಿಗೆ ಆಗಲಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ವೈರಸ್ ಸೋಂಕಿದ ಪ್ರಾಣಿ ಅಥವಾ ಮನುಷ್ಯನ ದೇಹ ಮೊದಲು ಕ್ಷೀಣಿಸುತ್ತಾ ಹೋಗುತ್ತದೆ. ಬಳಿಕ ಮೆದುಳು ನಿಷ್ಕ್ರೀಯವಾಗಿ ಸಾವು ಸಂಭವಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಒಟ್ನಲ್ಲಿ ಈ ಡೆಡ್ಲಿ ವೈರಸ್ ಆತಂಕ ಇದೀಗ ಯೂನೈಟೆಡ್ ಸ್ಟೇಟ್ಸನ್ನ ಭಾದಿಸುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದ್ರೂ ವಿಶ್ವದ ಮೂಲೆ ಮೂಲೆಯಲ್ಲಿರುವ ಮನುಷ್ಯರ ದೇಹ ಹೊಕ್ಕಬಹುದು. ಹೀಗಾಗಿ ಎಚ್ಚರಿಕೆ ಅತ್ಯಗತ್ಯ ಅಂತ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.