ನವದೆಹಲಿ; ಎಂಫಿಲ್‌ಗೆ (ಮಾಸ್ಟರ್ ಆಫ್ ಫಿಲಾಸಫಿ ) ಪದವಿ ಯುಜಿಸಿ ವಿವಿ, ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಮಾನ್ಯತೆ ಕಳೆದುಕೊಂಡಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಥಗಿತದ ಬಗ್ಗೆ ಮಾಹಿತಿ ಇಲ್ಲದಿದ್ದರಿಂದ ಕೆಲವು ಕಡೆ ಎಂಫಿಲ್‌ಗೆ ಸೇರ್ಪಡೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಈ ಪದವಿ ಮಾನ್ಯತೆ ಕಳೆದುಕೊಂಡಿರುವುದರಿಂದ ವಿದ್ಯಾರ್ಥಿಗಳು ಸೇರ್ಪಡೆಯಾಗುವುದನ್ನು ನಿಲ್ಲಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಹಾಗೆಯೇ ಶಿಕ್ಷಣ ಸಂಸ್ಥೆಗಳು ಈಗಾಗಲೇ ‘ಕೆಲವು ವಿವಿಗಳು ಎಂಫಿಲ್ ಅಧ್ಯಯನಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿ ಆಫರ್ ಮಾಡುತ್ತಿರುವುದು ಯುಜಿಸಿಯ ಗಮನಕ್ಕೆ ಬಂದಿರುವುದರಿಂದ ಶಿಕ್ಷಣ ಸಂಸ್ಥೆಗಳು ನಿಲ್ಲಿಸಬೇಕೆಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ.
ಎಂ.ಫಿಲ್ ಸ್ಥಗಿತಕ್ಕೆ ಕಾರಣ
- 2022ರಲ್ಲೇ ಯುಜಿಸಿಯಿಂದ ಮಾನ್ಯತೆ ಕಳೆದುಕೊಂಡ ಎಂಫಿಲ್
ಆದರೂ ಈ ಕೋರ್ಸ್‌ಗೆ ಪ್ರವೇಶ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು - ಮಾನ್ಯತೆ ಇಲ್ಲದ ವಿಷಯ ಗೊತ್ತಿಲ್ಲ ದೆ ಪ್ರವೇಶ ಪಡೆದು ಮೋಸಹೋಗು ತ್ತಿರುವ ವಿದ್ಯಾರ್ಥಿಗಳು
- ಹೀಗಾಗಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಯುಜಿಸಿ ಕಟ್ಟುನಿಟ್ಟಿನ ಸೂಚನೆ