ಸಿಸಿಬಿ ಜೈಲ್ ರೈಡ್.. ಹೋದ ಪುಟ್ಟ ಬಂದ ಪುಟ್ಟ.. ರುಟಿನ್ ಚೆಕ್.. ಏನೂ ಸಿಕ್ಕಿಲ್ವಾ.. ಇದೇನಿದು.?
ಬೆಂಗಳೂರು : ಕಳೆದ ಶನಿವಾರ ಪರಪ್ಪನ ಅಗ್ರಹಾರ ಜೈಲ್ಗೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು, ಸಿಸಿಬಿ ದಾಳಿ ಬಳಿಕ ಒಂದೊಂದಾಗಿ ಹೊರಗೆ ಬರುತ್ತಿರುವ ಜೈಲಿನ ಕರ್ಮಕಾಂಡದ ದೃಶ್ಯಗಳು, ರೌಡಿಶೀಟರ್ರ್ಗಳ ಮೋಜು-ಮಸ್ತಿಯ ಸ್ಟೋರಿಗಳು. ಸದ್ಯ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ, ಸಿಸಿಬಿ ಕೇವಲ ರುಟಿನ್ ಚೆಕ್ ನೆಪದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹ ದರ್ಶನ್ ಮಾಡಿ ಬಂದ್ರಾ ಇಲ್ಲ, ನಿಜವಾಗ್ಲೂ ಕೊಲೆ ಆರೋಪಿ ದರ್ಶನ್, ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಬ್ಯಾರಕ್ಗಳನ್ನು ಸರ್ಚ್ ಮಾಡಿದ್ರಾ ಅನ್ನೋ ಅನುಮಾನ ಈಗ ಎಲ್ಲರಲ್ಲೂ ಮೂಡುತ್ತಿದೆ.
ಅಷ್ಟೇ ಅಲ್ಲ, ಜೈಲಲ್ಲಿ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗನ ಬ್ಯಾರಕ್ಗೆ ಹೋಗಲೇ ಇಲ್ವಾ.? ಒಂದು ವೇಳೆ ಹೋಗಿದ್ರೆ ಕಾಮನ್ ಟಾಕ್ ಮುಗಿಸಿ ಹೊರಗಡೆ ಬಂದ್ರಾ ಅನ್ನೋದು ಮತ್ತೆ ಕೆಲವರ ಅನುಮಾನಕ್ಕೆ ಕಾರಣವಾಗಿದೆ. ಇನ್ನೂ ಅಧಿಕಾರಿ, ಸಿಬ್ಬಂದಿ ಸೇರಿದಂತೆ ನೂರು ಜನ ಸಿಸಿಬಿ ಪೊಲೀಸರು ದಾಳಿ ಮಾಡಿ ಏನು ಸಿಕ್ಕಲಿಲ್ಲ ಎಂದು ವಾಪಸ್ಸು ಬಂದಿದ್ರು. ಆದರೆ ಈಗ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ದೃಶ್ಯಗಳು ಬಹಿರಂಗವಾಗಿವೆ. ಸಿಸಿಬಿ ಅಧಿಕಾರಿಗಳ ದಾಳಿಯ ನೌಟಂಕಿ ನಾಟಕ ಬಟಾಬಯಲಾಗಿದೆ.
ಹಾಗಾದ್ರೆ ಯಾವ ಪುರುಷಾರ್ಥಕ್ಕೆ ಸಿಸಿಬಿ ದಾಳಿ? ಇವ್ರು ಕೂಡ ನಾಟಕ ಮಾಡಿದ್ರಾ, ಇಲ್ಲ ಗೊತ್ತಿದ್ದೂ ಗೊತ್ತಿಲ್ಲದವರಂತೆ ನಾಟಕ ಆಡುತ್ತಿದ್ದಾರಾ? ಅಂತ ಸಾಮಾನ್ಯ ಜನರು ಸಿಸಿಬಿ ದಾಳಿ ಬಗ್ಗೆ ಹಲವು ಅನುಮಾನದ ಪ್ರಶ್ನೆಗಳು ಹುಟ್ಟಿಕೊಂಡು ಹುತ್ತವನ್ನೆ ಕಟ್ಟುತ್ತಿದ್ದಾರೆ.