Wednesday, April 30, 2025
30.3 C
Bengaluru
LIVE
ಮನೆಸಿನಿಮಾದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ

ದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ

ಬೆಂಗಳೂರು: ದರ್ಶನ್‌ಗೆ ಸೇರಿದ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್‌ ಒಬ್ಬು ಆತ್ಮಹತ್ಯೆಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್‌ನೋಟ್‌ ಬರೆದಿಟ್ಟು ಶ್ರೀಧರ್‌ ಅವರು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ಏಪ್ರಿಲ್‌ 16 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಕಲ್ಲು ಬಂಡೆ ಮೇಲೆ ಅನಾಥವಾಗಿ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಶ್ರೀಧರ್ ಮೃತ ದೇಹ ಕಂಡು ಪೊಲೀಸರಿಗೆ ಸ್ನೇಹಿತ ಮಾಹಿತಿ ನೀಡಿದ್ದರು.

ಸುಮಾರು 10 ಎಕರೆ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್‌ನಲ್ಲಿ ಸುಮಾರು 1 ವರ್ಷ ಕಾಲ ಶ್ರೀಧರ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು. ವಿಷ ಸೇವಿಸಿದ ಪರಿಣಾಮ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದರು. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.  ಡೆತ್‌ನೋಟ್‌ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದರು.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರತಿಕ್ರಿಯಿಸಿ, ಆತ್ಮಹತ್ಯೆ ಮಾಡಿಕೊಳ್ಳುವಾಗ ಶ್ರೀಧರ್‌ ಡೆತ್ ನೋಟ್ ಬರೆದಿದ್ದರು. ಡೆತ್‌ ನೋಟ್‌ನಲ್ಲಿ ಒಂಟಿತನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖ ಮಾಡಿದ್ದರು. ಪೊಲೀಸರು ತೊಂದರೆ ಕೊಡಬೇಡಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಮ್ಮ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದು ಡೆತ್ ನೋಟ್ ಮತ್ತು ವಿಡಿಯೋ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಿಷ ಸೇವಿಸಿ ಸಾವು ಸಂಭವಿಸಿದೆ ಎಂದು ವರದಿ ಬಂದಿದೆ ಎಂದು ತಿಳಿಸಿದರು.

ಆತ್ಮಹತ್ಯೆ ಪತ್ರದಲ್ಲಿ ಏನಿತ್ತು?
ಪೊಲೀಸ್ ಸರ್ ನನ್ನ ಸಾವಿಗೆ ನಾನೇ ಕಾರಣ ನನ್ನ ಸಾವಿನ ಬಗ್ಗೆ ಯಾರೂ ಕಾರಣ ಅಲ್ಲ.. ನನ್ನ ಸಾವಿಗೆ ನಾನೇ ಕಾರಣ

ನನ್ನ ಒಂಟಿತನ ನನಗೆ ತುಂಬಾ ಜಾಸ್ತಿ ಕಾಡುತ್ತಾ ಇತ್ತು. ಎಷ್ಟೇ ಪ್ರಯತ್ನ ಪಟ್ಟರೂ ನನ್ನಿಂದ ಆಗಲಿಲ್ಲ.ಅದಕ್ಕೆಚೆನ್ನಾಗಿ ಯೋಚನೆ ಮಾಡಿ ನನ್ನ ಸಾವಿನ ನಿರ್ಧಾರ ನಾನೇ ಮಾಡಿ ಸಾಯುತ್ತಾ ಇದ್ದೇನೆ.

ನನ್ನ ಅಮ್ಮ, ಅಪ್ಪ, ಅಕ್ಕಂದಿರು ಮತ್ತು ನನ್ನ ಫ್ರೆಂಡ್ಸ್ ಯಾರಾದ್ರೂ ನನ್ನ ಸಾವಿನ ಬಗ್ಗೆ ಅನುಮಾನ ಇದೆ ಅಂತಾ ಹೇಳಿ ದೂರು ಕೊಟ್ಟರೆ ಅದನ್ನು ತಗೊಬೇಡಿ ಸರ್.

ಯಾಕಂದ್ರೆ ನನ್ನ ಸಾವು ನನ್ನ ನಿರ್ಧಾರ. ನಾನು ಚೆನ್ನಾಗಿ ಯೋಚನೆ ಮಾಡಿ, ನನ್ನ ನಾನೇ ಕಳೆದು ಕೊಳ್ತಾ ಇದ್ದೇನೆ. ದಯವಿಟ್ಟು ನನ್ನ ಬಗ್ಗೆ ಯಾರೂ ಕೆಟ್ಟದಾಗಿ ತಿಳ್ಕೊಬೇಡಿ. ಪೊಲೀಸ್ ಸರ್ ನನ್ನ ಸಾವಿಗೆ ನಾನೇ ಕಾರಣ. ದಯವಿಟ್ಟು ಸರ್ ಯಾರಿಗೂ ತೊಂದರೆ ಕೊಡಬೇಡಿ.

ಪ್ಲೀಸ್ ಸರ್. ನನ್ನ ಸಾವಿಗೆ ನಾನೇ ಕಾರಣ ಬದುಕಿದ್ದು ಮನೆ ಕಟ್ಟಬೇಕು ಅಂತಾ ತುಂಬಾ ಆಸೆ ಇತ್ತು. ಆಗ್ತಿಲ್ಲ. ನಾನು ಸತ್ತಮೇಲೆ ನನ್ನ ಗೋರಿ ಆದ್ರು ಕಟ್ಟಿ ಖುಷಿಯಾಗಿ ಇರಿ..

ಶ್ರೀಧರ್. ಎಸ್

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments