Thursday, November 20, 2025
27.5 C
Bengaluru
Google search engine
LIVE
ಮನೆಸಿನಿಮಾಇಷ್ಟು ಮುದ್ದಾಗಿರುವ ರಕ್ಷಿತಾ ಅವರನ್ನು ತಂದೆ ತಾಯಿ ಬಿಟ್ಟು ಹೋಗಿದ್ಯಾಕೆ; ಯೌವನದಲ್ಲಿ ಮಗಳು ಮಾಡಿದ್ದೇ ನು

ಇಷ್ಟು ಮುದ್ದಾಗಿರುವ ರಕ್ಷಿತಾ ಅವರನ್ನು ತಂದೆ ತಾಯಿ ಬಿಟ್ಟು ಹೋಗಿದ್ಯಾಕೆ; ಯೌವನದಲ್ಲಿ ಮಗಳು ಮಾಡಿದ್ದೇ ನು

ಬೆಂಗಳೂರು: ಮುಂಬೈನಲ್ಲಿ ಹುಟ್ಟಿದ ಶ್ವೇತಾ ಅಂದ್ರೆ ಕನ್ನಡಿಗರ ಪ್ರೀತಿಯ ಫೇವರಿಟ್ ಹೀರೋಯಿನ್ ‘ಕ್ರೇಜಿ ಕ್ವೀನ್’ ರಕ್ಷಿತಾ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕನ್ನಡಿಗರ ಸುಂಟರಗಾಳಿಯ ಬೆಡಗಿ. ರಕ್ಷಿತಾ ತಂದೆ ಪ್ರಖ್ಯಾತ ಕ್ಯಾಮರಾಮ್ಯಾನ್ ಗೌರಿಶಂಕರ್. ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಯಶಸ್ಸಿನಲ್ಲಿದ್ದಾಗಲೇ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿದ್ದು ಮಾತ್ರ ಆಗ ಹಲವರಿಗೆ ಶಾಕ್ ನೀಡಿತ್ತು.

ಪ್ರೇಮ್ ಅವರ ಮಂಡ್ಯದವರು, ಇಂಗ್ಲಿಷ್ ಗೊತ್ತಿಲ್ಲ. ಆದರೆ ರಕ್ಷಿತಾ ಮಾತ್ರ ಸಿಟಿಯಲ್ಲಿ, ಶ್ರೀಮಂತ ಮನೆಯಲ್ಲಿ ಬೆಳೆದವರು. ರಕ್ಷಿತಾಗೆ ಹಳ್ಳಿಯ ಬದುಕು, ಸೊಗಡಿನ ಬಗ್ಗೆ ಏನೂ ಗೊತ್ತಿಲ್ಲ. ಇವರಿಬ್ಬರು ಹೇಗೆ ಪ್ರೀತಿ ಮಾಡಿದರು? ಹೇಗೆ ಮದುವೆಯಾದರು ಎಂಬುದು ಹಲವರಿಗೆ ಇನ್ನೂ ಆಶ್ಚರ್ಯವಾಗಿ ಉಳಿದಿದೆ. ಮನಸು ಮನಸುಗಳು ಒಂದಾದರೆ ಇನ್ನೇನು ಬೇಕು ಅಲ್ಲವೇ! ಹಾಗೆಯೇ ರಕ್ಷಿತಾ-ಪ್ರೇಮ್ ಪ್ರೀತಿಸಿ ಮದುವೆಯಾದರು. ಇಂದು ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ.

ರಕ್ಷಿತಾ ಮದುವೆ ರಾಜರಾಜೇಶ್ವರಿ ನಗರದಲ್ಲಿ ನಡೆಯಿತು. ಸಾವಿರಾರು ಜನರು ಈ ಮದುವೆಗೆ ಸಾಕ್ಷಿಯಾಗಿದ್ದರು. ಚಿಕ್ಕ ಚಿಕ್ಕ ಮಕ್ಕಳು, ವಿಕಲಚೇತನರು ಕೂಡ ಈ ಮದುವೆಗೆ ಹೂವು ಹಾಕಿ ಹಾರೈಸಿದ್ದರಂತೆ. ಮದುವೆಯಾದಮೇಲೆ ರಕ್ಷಿತಾ ಪ್ರೇಮ್ ಕೂಡ ತುಂಬ ಬದಲಾದರು. ರಕ್ಷಿತಾ ರಾಗಿ-ಮುದ್ದೆ ತಿನ್ನೋದು ಕಲಿತಿದ್ದಾರೆ, ಪ್ರೇಮ್ ಕೂಡ ಚೈನೀಸ್ ಫುಡ್‌ ತಿನ್ನುತ್ತಿದ್ದಾರೆ. ಹಬ್ಬಗಳನ್ನು ರಕ್ಷಿತಾ ಈಗ ಸಂಪ್ರದಾಯಬದ್ಧವಾಗಿ ಆಚರಿಸುತ್ತಾರೆ. ಮದುವೆ ಮುನ್ನ ಸ್ವತಂತ್ರವಾಗಿದ್ದ ರಕ್ಷಿತಾ, ಪ್ರೇಮ್‌ರಿಂದಾಗಿ ಅವಲಂಬಿಯಾದರಂತೆ. ಹೌದು ಕೆಲ ಬಟ್ಟೆಗಳ ಮಾರಿ ಕೂಡ ರಕ್ಷಿತಾ ಜೀವನ ಸಾಗಿಸಿದ್ದ ದಿನಗಳು ಇವೆಯಂತೆ.

ಬಡತನ ಅವರನ್ನು ಕಟ್ಟಿ ಹಾಕಿತ್ತು.ರಕ್ಷಿತಾ ತಂದೆ ತಾಯಿ ಸಪರೇಟ್ ಆಗಿದ್ದರು. ಇವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಮದುವೆ ಬಗ್ಗೆ ರಕ್ಷಿತಾಗೆ ಮೊದಲು ನಂಬಿಕೆಯಿರಲಿಲ್ಲ. ಆದರೆ ಪ್ರೇಮ್ ಅವರಲ್ಲಿ ತಂದೆಯ ಗುಣಗಳನ್ನು ಕಂಡ ರಕ್ಷಿತಾ ಅವರನ್ನೇ ಮದುವೆಯಾಗಲು ನಿರ್ಧಾರ ಮಾಡಿದರು.

ನಟ ಪ್ರೇಮ್‌ಗೆ ಯಾವುದೇ ದುಶ್ಚಟಗಳಿಲ್ಲ. ಹೀಗಾಗಿ ರಕ್ಷಿತಾಗೆ ಬಯ್ಯಲು ಕಾರಣ ಕೂಡ ಇಲ್ಲವಂತೆ. 2007ರಲ್ಲಿ ಮದುವೆಯಾಗಿದ್ದ ರಕ್ಷಿತಾ, ಪ್ರೇಮ್ ಇಂದು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments