ಬೆಂಗಳುರು: ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್ ಮತ್ತು ಸಖತ್ ಬ್ಯೂಟಿಫುಲ್ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಸಾನ್ವಿ ಮತ್ತೆ ಸುದ್ದಿಯಲ್ಲಿದ್ದಾರೆ.
ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವ ಸಾನ್ವಿ ಇದೀಗ ಟಾಟ್ಯೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್ನಲ್ಲಿ ಇದ್ದಾರೆ. ಹೌದು, ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಾನ್ವಿ ಅವರು ಹೊಸ ಟಾಟ್ಯೂವೊಂದನ್ನು ಹಾಕಿಸಿಕೊಂಡಿದ್ದಾರೆ. ಹೌದು, ಇದೇ ಟಾಟ್ಯೂ ನೋಡಿದ ಅಭಿಮಾನಿಗಳು ಏನಿದು ಅಂತ ತಲೆ ಕರೆಸಿಕೊಂಡಿದ್ದಾರೆ.
ಸಾನ್ವಿ ಸುದೀಪ್ ಅವರು ಕತ್ತಿನಲ್ಲಿ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಇನ್ನು, PIKU ಅಂತ ಟಾಟ್ಯೂ ಹಾಕಿಸಿಕೊಳ್ಳಲು ಮುಖ್ಯ ಕಾರಣ ಸಂಜೀವ್ ಮಂಜಪ್ಪ. ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಮಂಜಪ್ಪ ಅವರು ಸಾನ್ವಿಯನ್ನು ಪ್ರೀತಿಯಿಂದ ಪೀಕು ಅಂತ ಕರೆಯುತ್ತಾರಂತೆ. ಹೀಗಾಗಿ ಅದೇ ಹೆಸರನ್ನು ಸಾನ್ವಿ ಅವರು ತಮ್ಮ ಕತ್ತಿನ ಮೇಲೆ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರಂತೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.