Thursday, August 21, 2025
26.3 C
Bengaluru
Google search engine
LIVE
ಮನೆಕ್ರಿಕೆಟ್ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಅಭ್ಯಾಸ; ಮುಂಬೈನಲ್ಲಿ ಎಂಜಾಯ್​ ಮಾಡುತ್ತಿರುವ ಕೊಹ್ಲಿ

ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಅಭ್ಯಾಸ; ಮುಂಬೈನಲ್ಲಿ ಎಂಜಾಯ್​ ಮಾಡುತ್ತಿರುವ ಕೊಹ್ಲಿ

ಮುಂಬಯಿ: ಒಂದೆಡೆ ಟೀಮ್​ ಇಂಡಿಯಾದ ಆಟಗಾರರೆಲ್ಲ ಟಿ20 ವಿಶ್ವಕಪ್​ ಗೆಲ್ಲುವ ಪಣತೊಟ್ಟು ನ್ಯೂಯಾರ್ಕ್​ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ವಿರಾಟ್​ ಕೊಹ್ಲಿ(Virat Kohli) ಅವರು ಮುಂಬೈನಲ್ಲಿ ಸಖತ್​ ಪಾರ್ಟಿ ಮಾಡಿಕೊಂಡು ಎಂಜಾಯ್​ ಮಾಡುತ್ತಿದ್ದಾರೆ. ಕೊಹ್ಲಿಯ ಈ ನಡೆಯನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಖಂಡಿಸಿದ್ದಾರೆ.

ಕಳೆದ ಶನಿವಾರ ಭಾರತ ತಂಡದ ನಾಯಕ ರೋಹಿತ್​ ಶರ್ಮ, ಕೋಚ್​ ರಾಹುಲ್​ ದ್ರಾವಿಡ್​, ರಿಷಭ್​ ಪಂತ್​, ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ ಸೇರಿ ಬಹುತೇಕ ಆಟಗಾರರು ನ್ಯೂಯಾರ್ಕ್​ಗೆ ತೆರಳಿದ್ದರು. ಈ ವೇಳೆ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಪ್ರಯಾಣಿಸಿರಲಿಲ್ಲ. ಇದೀಗ ಮುಂಬೈಯ ರೆಸ್ಟೋರೆಂಟ್​ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಗೆ ಮುಂಬೈನಲ್ಲಿ ಡಿನ್ನರ್ ಪಾರ್ಟಿ ನಡೆಸಿದ್ದಾರೆ.

ಈ ಪಾರ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಬೌಲರ್ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ, ಜನಪ್ರಿಯ ದೂರದರ್ಶನ ಕಾಮೆಂಟೇಟರ್ ಗೌರವ್ ಕಪೂರ್ ಕೂಡ ಭಾಗಿಯಾಗಿದ್ದರು. ಈ ವಿಡಿಯೊ ಕಂಡ ನೆಟ್ಟಿಗರು ಕೊಹ್ಲಿಗೆ ಈಗ ತಂಡಕ್ಕಿಂತ ಕೇವಲ ಪಾರ್ಟಿ ಮಾಡಿ ಕಾಲ ಕಳೆಯುವುದು ಖಷಿ ನೀಡುತ್ತಿದೆ. ಈತ ಕೇವಲ ತನ್ನ ವೈಯಕ್ತಿಕ ದಾಖಲೆಗಾಗಿ ಮಾತ್ರ ಆಡುತ್ತಾನೆ ಎಂದು ಕಮೆಂಟ್​ ಮಾಡಿದ್ದಾರೆ.

https://twitter.com/wrognxvirat/status/1795528474775687253?ref_src=twsrc%5Etfw%7Ctwcamp%5Etweetembed%7Ctwterm%5E1795528474775687253%7Ctwgr%5Ea4f0da018abc1cd53df6ffd1c58b6056a0e57ce4%7Ctwcon%5Es1_&ref_url=https%3A%2F%2Fvistaranews.com%2Fsports%2Fvirat-kohli-anushka-sharma-and-virat-kohlis-dinner-date-done-right%2F662549.html

ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್(eam India in New York)​ ತಲುಪಿರುವ ಟೀಮ್​ ಇಂಡಿಯಾದ(Team India ) ಮೊದಲ ಬ್ಯಾಚ್​ ಅಭ್ಯಾಸ ಆರಂಭಿಸಿದೆ. ಎಲ್ಲ ಆಟಗಾರರು ಇಂದು ರನ್ನಿಂಗ್​ ಮತ್ತು ಫುಟ್ಬಾಲ್​ ಆಡುವ ಮೂಲಕ ವ್ಯಾಯಾಮ ನಡೆಸಿದ್ದಾರೆ. ಗುರುವಾರದಿಂದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಆರಂಭಿಸಲಿದ್ದಾರೆ. ಟೀಮ್​ ಇಂಡಿಯಾದ ದ್ವಿತೀಯ ಬ್ಯಾಚ್​ ಇಂದು ನ್ಯೂಯಾರ್ಕ್​ಗೆ ತಲುಪಲಿದೆ.

ಐಪಿಎಲ್ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ಭಾರತ ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ಮತ್ತು ಭಾರತ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ.

https://twitter.com/BCCI/status/1795667478292406694?ref_src=twsrc%5Etfw%7Ctwcamp%5Etweetembed%7Ctwterm%5E1795667478292406694%7Ctwgr%5Ea4f0da018abc1cd53df6ffd1c58b6056a0e57ce4%7Ctwcon%5Es1_&ref_url=https%3A%2F%2Fvistaranews.com%2Fsports%2Fvirat-kohli-anushka-sharma-and-virat-kohlis-dinner-date-done-right%2F662549.html

ಭಾರತ ತಂಡ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ , ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ , ಸಂಜು ಸ್ಯಾಮ್ಸನ್ , ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments