ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ಮತ್ತೆ ಡೀಪ್ ಫೇಕ್ ಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಡೀಪ್ ಫೇಕ್ ಗೆ ಸಂಬಂಧಿಸಿದಂತೆ ಕೆಲವರನ್ನು ಅರೆಸ್ಟ್ ಮಾಡಿದ್ದರೂ ಬುದ್ದಿ ಕಲಿಯದ ಕಿಡಿಗೇಡಿಗಳು ಮತ್ತೆ ಅದೇ ಕೆಲಸ ಮಾಡಿದ್ದಾರೆ. ಮಾಡೆಲ್ ಕಂ ಕಂಟೆಂಟ್ ಕ್ರಿಯೇಟರ್ ಡೇನಿಯಾಲ ವಿಲ್ಲಾರ್ರಿಯಲ್ ಅವರ ವಿಡಿಯೋಗೆ ರಶ್ಮಿಕಾರ ಮುಖವನ್ನು ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.

ರಶ್ಮಿಕಾ ಅವರ ಡೀಪ್ ಫೇಕ್ ವೀಡಿಯೋವನ್ನು ಏಪ್ರಿಲ್ 19, 2024 ರಂದು ತನ್ನ Instagram ಪ್ರೊಫೈಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಅದೇ ಬಿಕಿನಿಯಲ್ಲಿರುವ ವಿಲ್ಲಾರ್ರಿಯಲ್ ಅವರ ಇತರ ಚಿತ್ರಗಳು ಮತ್ತು ವೀಡಿಯೊಗಳ ಜೊತೆಗೆ ವಿಡಿಯೋದಲ್ಲಿರುವುದು ಮೂಲ ವ್ಯಕ್ತಿಯೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ ಎನ್ನುವುದು ರಿವೀಲ್ ಆಗಿದೆ.
ವಿಡಿಯೋವನ್ನು ಫೇಸ್‌ಬುಕ್ , ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ . ಒಂದು ಪೋಸ್ಟ್ 45,000 ಕ್ಕೂ ಹೆಚ್ಚು ಇಷ್ಟಗಳನ್ನು ಮತ್ತು ಸುಮಾರು 300 ಶೇರ್‌ಗಳನ್ನು ಗಳಿಸಿದೆ.
ಸೂಕ್ಷ್ಮವಾಗಿ ಗಮನಿಸಿದಾಗ, ಮಂದಣ್ಣ ಅವರ ವೈರಲ್ ಕ್ಲಿಪ್‌ನಲ್ಲಿನ ವ್ಯತ್ಯಾಸಗಳನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ, ಮಹಿಳೆಯ ಕಣ್ಣಿನ ಚಲನೆಗಳು ಅಸ್ವಾಭಾವಿಕವಾಗಿ ಕಂಡುಬರುತ್ತವೆ.
ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿದ್ದೇ ಹರಿದಾಡಿದ್ದು, ಡೀಪ್‌ಫೇಕ್ ತಂತ್ರಜ್ಞಾನದ ಬಗ್ಗೆ ಚರ್ಚೆ ಜೋರಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರು ಎಲೆವೆಟರ್ ಪ್ರವೇಶಿಸುವ ವಿಡಿಯೋ ಇದಾಗಿದೆ. ಒಮ್ಮೆಲೆ ನೋಡಿದರೆ ಎಲ್ಲರೂ ಇದು ಕಿರಿಕ್ ಬೆಡಗಿ ರಶ್ಮಿಕಾ ಅಂತಾನೇ ಭಾವಿಸೋದು. ಆದರೆ ಈ ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಬದಲಿಗೆ ಝರಾ ಪಾಟೀಲ್ ಎಂಬ ಬ್ರಿಟಿಷ್ ಭಾರತೀಯ ಮಹಿಳೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com