Wednesday, January 28, 2026
23.8 C
Bengaluru
Google search engine
LIVE
ಮನೆ#Exclusive NewsTop Newsಭವ್ಯವಾದ ಕಟ್ಟಡನಿರ್ಮಾಣಕ್ಕಿರುವ 20 ಕೋಟಿ, ಶಾಲಾ ಕಟ್ಟಡಕ್ಕೆ ಯಾಕಿಲ್ಲ....?

ಭವ್ಯವಾದ ಕಟ್ಟಡನಿರ್ಮಾಣಕ್ಕಿರುವ 20 ಕೋಟಿ, ಶಾಲಾ ಕಟ್ಟಡಕ್ಕೆ ಯಾಕಿಲ್ಲ….?

ಹಾವೇರಿ; ಚಾಪೆ ಕುಳಿತು ಪಾಠ ಕೇಳುವ ಮಕ್ಕಳು, ಬೆಡ್ ಇಲ್ಲದೆ ನೆಲದ ಮೇಲೆ ಮಲಗುವ ಮಕ್ಕಳು

ಗ್ಯಾರಂಟಿ ಯೋಜನೆಗಳಿಗೆ ಸರಕಾರ ಸಾವಿರಾರು ಕೋಟಿ ವೆಚ್ಚ ಮಾಡ್ತಿದೆ. ಆದ್ರೆ ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಲು ಚೌಕಾಸಿ ಮಾಡ್ತಿದೆ. ಹೌದು ಹಾವೇರಿಯ ಅಕ್ಕೂರಿನಲ್ಲಿರುವ ಡಾ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯನ್ನ 20 ಕೋಟಿ ವೆಚ್ಚ ಮಾಡಿ ಕಟ್ಟಲಾಗಿದೆ. 20 ಕೋಟಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ, ಮಕ್ಕಳಿಗೆ ಡೆಸ್ಕ್ ನೀಡುವುದನ್ನ ಸರಕಾರ ಮೆರೆತಿದೆ.

ನೆಲದ ಮೇಲೆ ಚಾಪೆ ಹಾಸಿಕೊಂಡು ಮಕ್ಕಳು ಪಾಠ ಕೇಳುತ್ತಿದ್ದಾರೆ. ಡೆಸ್ಕ್ ನಂತಹ ಮೂಲಭೂತ ಸೌಲಭ್ಯ ನೀಡದ ಸರಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ಶಾಲಾ ಕೊಠಡಿಗಳಲ್ಲಿ ಮಕ್ಕಳು ದಿನವಿಡಿ ಚಾಪೆ ಮೇಲೆ ಕುಳಿತು ಪಾಠ ಕೇಳ್ತಿದ್ರೆ, ಇತ್ತ ವಸತಿ ನಿಲಯದಲ್ಲಿ ಕಾಟ್ ಹಾಗೂ ಬೆಡ್ ನೀಡಿಲ್ಲ. ಬೆಡ್ ನೀಡದ ಪರಿಣಾಮ ಕೊರೆಯುವ ಚಳಿಯಲ್ಲಿ ನೆಲದ ಮೇಲೆ ಮಕ್ಕಳು ಮಲಗುವಂತಾಗಿದೆ. ಅಷ್ಟೆ ಅಲ್ಲದೆ ಡೈನಿಂಗ್ ಹಾಲ್ ನಲ್ಲಿ ಡೈನಿಂಗ್ ಟೇಬಲ್ ಕೊಡುವುದನ್ನು ಸರಕಾರ ಮರೆತು ಬಿಟ್ಟಿದೆ. ಅಲ್ಪ ಸಂಖ್ಯಾತ ಇಲಾಖೆಗೆ ಸೇರಿದ ಈ ವಸತಿ ಶಾಲೆಯಲ್ಲಿ 560 ಮಕ್ಕಳು ಕಲಿಯುತ್ತಿದ್ದು, ಮೂಲಭೂತ ಸೌಲಭ್ಯಗಳಿಲ್ಲದಿರುವುದನ್ನ ಅಧಿಕಾರಿಗಳೇ ಒಪ್ಪಿಕೊಂಡಿದ್ದು ತಮ್ಮ ಅಸಹಾಯಕತೆಗೆ ಸಾಕ್ಷಿಯಾಗಿದ್ದಾರೆ…

3 ಕೋಟಿ ಕೋಟಿ ವೆಚ್ಚದಲ್ಲಿ ಬಿಲ್ಡಿಂಗ್ ಕಟ್ಟಿದ ಸರಕಾರ, ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಲಭ್ಯ ನೀಡುವುದನ್ನ ಮರೆತಂತಿದೆ. ಇನ್ನಾದ್ರು ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡುವ ಬದಲು ಮಕ್ಕಳ ಭವಿಷ್ಯ ರೂಪಿಸಲು ಮೂಲಭೂತ ಸೌಲಭ್ಯ ನೀಡಬೇಕಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments