Wednesday, April 30, 2025
34.5 C
Bengaluru
LIVE
ಮನೆಸಿನಿಮಾನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

 ಕನ್ನಡದ ‘ಹೆಡ್‌ಬುಷ್’  ನಟಿ ಪಾಯಲ್ ರಜಪೂತ್ ಚಿತ್ರವೊಂದರ ನಿರ್ಮಾಪಕರ ಬಗ್ಗೆ ಆರೋಪಿಸಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಸಂಭಾವನೆ ನೀಡಿಲ್ಲ. ಆದರೂ ಸಿನಿಮಾ ಪ್ರಚಾರ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ನಟಿ ಪಾಯಲ್ ನಿರ್ಮಾಪಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ನನ್ನ ಬಳಿ ‘ರಕ್ಷಣ’ ಎಂಬ ಸಿನಿಮಾವಿದೆ. ಇದನ್ನು 2019 ಮತ್ತು 2020ರಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಮೂಲತಃ 5Ws ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಇತ್ತೀಚೆಗೆ ನನಗೆ ಸಿಕ್ಕ ಯಶಸ್ಸು ನೋಡಿ ಈಗ ನಿರ್ಮಾಪಕರು ಆ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನನ್ನ ಬಾಕಿ ಹಣಗಳನ್ನು ಕ್ಲೀಯರ್ ಮಾಡದೇ ಪ್ರಚಾರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಚಿತ್ರದ ಪ್ರಚಾರಕ್ಕೆ ಬರದೇ ಇದ್ದರೆ ತೆಲುಗು ಉದ್ಯಮದಿಂದ ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ತಂಡ ಬಾಕಿ ಮೊತ್ತದ ಬಗ್ಗೆ ಚರ್ಚಿಸಿದಾಗ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು. ನನ್ನ ಹೆಸರನ್ನು ಡ್ಯಾಮೇಜ್ ಆಗುವಂತೆ ಬಳಸಲಾಗುತ್ತಿದೆ. ಇತ್ತೀಚಿನ ಮೀಟಿಂಗ್‌ನಲ್ಲಿ ನನ್ನ ಬಗ್ಗೆ ಅಸಭ್ಯ ಭಾಷೆ ಬಳಸಲಾಗಿದೆ. ನನಗೆ ನೀಡಬೇಕಾದ ಸಂಪೂರ್ಣ ಸಂಭಾವನೆಯನ್ನು ನೀಡದೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಕ್ಕಾಗಿ ನಾನು ಈಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಪಾಯಲ್ ಬರೆದುಕೊಂಡಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments