ಬೆಂಗಳೂರು : ಪ್ರಿಯತಮೆಯನ್ನು ಟ್ಯಾಂಕ್‌ ಮೇಲೆ ಕೂರಿಸಿಕೊಂಡು ಕಿಸ್‌ ಮಾಡುತ್ತಲೇ ಬೈಕ್‌ ಓಡಿಸಿದ ಪ್ರಕರಣಗಳನ್ನು ಈ ಹಿಂದೆ ಓದಿದ್ದೀರಿ. ಇದೀಗ ಯುವಕನೊಬ್ಬ ಯುವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಜಾಲಿ ರೈಡ್‌ ಹೋದ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಈ ಘಟನೆ ಬೆಂಗಳೂರಿನ ಯಲಹಂಕದ ಏರ್ ಪೋರ್ಟ್ ರಸ್ತೆಯ ಯಲಹಂಕ ಫ್ಲೈ‌ ಓವರ್ ಮೇಲೆ ನಡೆದಿದೆ ಎನ್ನಲಾಗಿದೆ. ಇದರ ವೀಡಿಯೋವನ್ನು ವಾಹನ ಸವಾರರೊಬ್ಬರು ವೀಡಿಯೋ ಮಾಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
ಮೇ 17 ರಂದು ರಾತ್ರಿ ಯುವಕ ಹೆಲ್ಮೆಟ್​ ಧರಿಸದೇ ಅಜಾಗರೂಕತೆಯಿಂದ ಬೈಕ್​ ಚಾಲನೆ ಮಾಡಿದ್ದಾನೆ. ಅಲ್ಲದೆ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಡೆಡ್ಲಿ ಬೈಕ್​ ರೈಡ್​ ಮಾಡಿದ್ದಾನೆ.

ಈ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಇನ್ನೂ ಇಬ್ಬರ‌ ಮೇಲೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights