ಚಿತ್ರದುರ್ಗ: ಬೆಂಗಳೂರಿನ ನೀಲಸಂದ್ರದ ಮನೆಯೊಂದರಲ್ಲಿ ಲಕ್ಷ ಲಕ್ಷ ಹಣ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದ ಕಳ್ಳರನ್ನು ಚಿತ್ರದುರ್ಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಂಗಳೂರಿನ ನೀಲಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಜೀಮ್ ಅಪ್ಸಾನ್ ಮನೆಯಲ್ಲಿ 50 ಲಕ್ಷ ಹಣ, 11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಮುಂಬೈಗೆ ಹೋಗುತ್ತಿದ್ದ ಇಬ್ಬರು ಕಳ್ಳರನ್ನು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಒ ಬ್ಬ ರೌಡಿ ಶೀಟರ್ ಸಲ್ಮಾನ್ ಮತ್ತು ಅಸ್ಗರ್ ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಬೆಂಗಳೂರು ಪೊಲೀಸರು,ಆರೋಪಿಗಳನ್ನು ಹಿಂಬಾಲಿಸಿದ್ದು, ಬಸ್ ಚಾಲಕನನ್ನು ಸಂಪರ್ಕಿಸಿ ಠಾಣೆಗೆ ಬರಲು ತಿಳಿಸಿದ್ದರು. ಅದರಂತೆ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ಚಾಲಕ ಬಸ್ ತಂದಿದ್ದ, ಬಸ್ ಬರುತ್ತಿದ್ದಂತೆ ಹಿರಿಯೂರು ಡಿವೈಎಸ್ಪಿ ಚೈತ್ರಾ, ಚಿತ್ರದುರ್ಗ ಡಿವೈಎಸ್ಪಿ ದಿನಕರ್, ನೇತೃತ್ವದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಸುನೀಲ್ ಹುಲುಮನಿ ತಂಡ ಬಂಧಿಸಿದ್ದಾರೆ. ಬೆಂಗಳೂರಿನ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com


