ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುತ್ತಿರುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇದೀಗ ದೇಶದಲ್ಲಿ ಲೋಕಸಭೆ ಚುನಾವಣೆಯ ಅಬ್ಬರ ಇರುವುದರಿಂದ ರಾಜಕಾರಣಿಗಳನ್ನೂ ಟ್ರೋಲ್ ಮಾಡಲಾಗುತ್ತಿದೆ. ಅಂಥ ಒಂದು ವಿಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಎನಿಮೇಟೆಡ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಪ್ ಸ್ಟಾರ್ ಒಬ್ಬರು ವೇದಿಕೆ ಮೇಲೆ ನೃತ್ಯ ಮಾಡಿರುವ ವಿಡಿಯೋಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಾಯದಿಂದ ಅದಕ್ಕೆ ಮೋದಿ ಅವರ ಚಹರೆ ಬಳಸಿ ವ್ಯಕ್ತಿಯೊಬ್ಬರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಗಮನಿಸಿರುವ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ರಿ ಪೋಸ್ಟ್ ಮಾಡಿದ್ದಾರೆ. “ನಿಮ್ಮ ಹಾಗೇ ನಾನೂ ಕೂಡ ನನ್ನ ಎನಿಮೇಟೆಡ್ ಡ್ಯಾನ್ಸ್ ನೋಡಿ ಆನಂದಿಸಿದ್ದೇನೆ. ಚುನಾವಣೆಯ ಬಿಡುವಿನಲ್ಲಿ ಇಂತಹ ವಿಡಿಯೋ ನಿಜಕ್ಕೂ ಖುಷಿ ನೀಡಿತು” ಎಂದು ಬರೆದಿದ್ದಾರೆ.
https://twitter.com/narendramodi/status/1787523212374393082
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com


