ಬೆಂಗಳೂರು: ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಹಾಗೂ ವೇಗವಾಗಿ ಸಂಚರಿಸಲು ಬೆಂಗಳೂರಿನ ಜನ ನಮ್ಮ ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದು, ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅತೀ ವೇಗದ ಸಂಪರ್ಕ ಸಾರಿಗೆಯಾಗಿದೆ. ಹೀಗಾಗಿ ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ.
ನಮ್ಮ ಮೆಟ್ರೋದಲ್ಲಿ ವಿವಿಧ ರೀತಿಯ ಪ್ರಯಾಣಿಕರನ್ನು ಕಾಣಬಹುದು. ನಮ್ಮ ಮೆಟ್ರೋದಲ್ಲಿ ಅನೇಕ ನಿಯಮಗಳಿದ್ದರೂ ಸಹ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ತಮ್ಮಿಷ್ಟದಂತೆ ವರ್ತಿಸುವುದನ್ನು ಕಾಣಬಹುದು. ಡಾನ್ಸ್ ಮಾಡುವುದು, ರೀಲ್ಸ್ ಮಾಡುವುದು, ಜೋರಾಗಿ ಮಾತನಾಡುವುದು ಹೀಗೇ ಅನೇಕ ರೀತಿಯ ವರ್ತನೆ. ಇದರಿಂದ ಸಹ ಪ್ರಯಾಣಿಕ ತೊಂದರೆಯಾಗುತ್ತಿದ್ದರೂ ಸಹ ಅದನ್ನು ಲೆಕ್ಕಿಸದೇ ಕೆಲವು ಪ್ರಯಾಣಿಕರು ಮನಬಂದತೆ ವರ್ತಿಸುತ್ತಾರೆ
ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋದಲ್ಲಿ ನಡೆದ ಘಟನೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಿಂದ ಪ್ರಯಾಣಿಕರು ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ನಮ್ಮ ಮೆಟ್ರೋದ ಬಾಗಿಲು ಬಳಿ ಯುವಕ-ಯುವತಿ ತಬ್ಬಿಕೊಂಡು ನಿಂತು ಇತರರಿಗೆ ಮುಜುಗರವಾಗುವಂತೆ ವರ್ತಿಸಿದ್ದಾರೆ. ಸಾರ್ವಜನಿಕ ಸಾರಿಗೆಯಾಗಿರುವ ನಮ್ಮ ಮೆಟ್ರೋದಲ್ಲೇ ನಿಂತು ಯುವಕ-ಯುವತಿ ತಬ್ಬಿಕೊಂಡು ನಿಂತು ಯುವತಿ ಯುವಕನಿಗೆ ಮುತ್ತು ನೀಡುತ್ತಿರುವ ದೃಶ್ಯವನ್ನು ಸಹ ಪ್ರಯಾಣಿಕ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ನಮ್ಮ ಮೆಟ್ರೋದಲ್ಲಿ ಇದೇನಿದು ಅಸಭ್ಯ ವರ್ತನೆ? ಬೆಂಗಳೂರು ಮೆಟ್ರೋ ನಿಧಾನವಾಗಿ ದೆಹಲಿ ಮೆಟ್ರೋ ರೀತಿ ಆಗುತ್ತಿದೆ. ನಮ್ಮ ಮೆಟ್ರೋದಲ್ಲಿ ನಡೆದ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಬೆಂಗಳೂರು ಪೊಲೀಸರು ಹಾಗೂ ಬಿಎಂಆರ್ಸಿಎಲ್ ಸಂಸ್ಥೆಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ
ಈ ದೂರಿಗೆ ಟ್ವೀಟ್‌ನಲ್ಲೇ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸರು ‘ಈ ಪ್ರಕರಣವನ್ನು ಪರಿಗಣಿಸಲಾಗಿದೆ. ಇನ್ನಷ್ಟು ಮಾಹಿತಿ ನೀಡಿ’ ಎಂದು ದೂರುದಾರರಲ್ಲಿ ತಿಳಿಸಿದ್ದಾರೆ. ಸದ್ಯ ಈ ಯುವಕ-ಯುವತಿಯ ವಿಡಿಯೋ ವೈರಲ್ ಆಗುತ್ತಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
https://twitter.com/Sam459om/status/1787134569872855179?ref_src=twsrc%5Etfw%7Ctwcamp%5Etweetembed%7Ctwterm%5E1787134569872855179%7Ctwgr%5Ea4b693d6f97af67b0f230b89465527dd506c819b%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2024%2FMay%2F06%2Fafter-delhi-a-young-lovers-romance-in-bengaluru-namma-metro-train-goes-viral
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com