ಭಾರತದಲ್ಲಿರುವ ವಿವಾಹ ಪದ್ಧತಿಗಳಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಕ್ರಮ ಇರುತ್ತದೆ. ಈ ವಿವಾಹದ ಕ್ರಮಗಳಲ್ಲಿ ಸಾಕಷ್ಟು ವೈವಿಧ್ಯತೆಯನ್ನು ನಾವು ನೋಡಬಹುದು. ಅಂತೆಯೇ ಕೆಲವು ಕಡೆ ವಧು, ವರ ಕುದುರೆಯಲ್ಲಿ ಬರುವ ಕ್ರಮವೂ ಇದೆ. ಇದು ವೈಭವ, ಸಂಪ್ರದಾಯದ ಸಂಕೇತವೂ ಹೌದು. ಕುದುರೆಯಲ್ಲಿ ಕುಳಿತು ವರ ದಿಬ್ಬಣದೊಂದಿಗೆ ಸಾಕುವ ಖುಷಿ ಸಂಬಂಧಿಕರ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಯಾಗಿಸುತ್ತದೆ. ಇನ್ನು ಈ ಸಂದರ್ಭದ ನೃತ್ಯ ಈ ಖುಷಿಗೆ ಮತ್ತಷ್ಟು ರಂಗು ತರುತ್ತದೆ.
ಜೊತೆಗೆ ಈ ಖುಷಿಯ ಕ್ಷಣದ ಸಂದರ್ಭದಲ್ಲಿ ಸಾಕಷ್ಟು ಆಸಕ್ತಿದಾಯಕ ದೃಶ್ಯಗಳೂ ಸೆರೆಯಾಗುತ್ತವೆ. ಇಂತಹ ದೃಶ್ಯಗಳು ಕ್ಷಣ ಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಇದು ಕುದುರೆಯೊಂದಿಗೆ ವ್ಯಕ್ತಿಯೊಬ್ಬರು ನೃತ್ಯ ಮಾಡುವ ದೃಶ್ಯ. ಕೇಳುವಾಗಲೇ ಅಚ್ಚರಿಯಾಗುತ್ತದೆ ಅಲ್ವಾ.