ಹುಬ್ಬಳ್ಳಿ: ಇತ್ತೀಚಿಗೆ ದೇಶ ಮಾರುವವರು ಜಾಸ್ತಿಯಾಗಿದ್ದಾರೆ. ಮಹಾಪ್ರಭುಗಳು ಆಳ್ವಿಕೆ ನಡೆಸುತ್ತಿದ್ದಾರೆ. ಅವರು ಒಂದೇ ಭಾಷೆಯಲ್ಲಿ ಮಾತನಾಡುತ್ತಾರೆ. ನಾನು ಏಳು ಭಾಷೆಯಲ್ಲಿ ಮಾತನಾಡುತ್ತೇನೆ.
ಮಹಾಪ್ರಭುಗಳು ಎಲ್ಲೆಲ್ಲಿ ಹೋಗ್ತಾರೋ ನಾನು ಹೋಗ್ತೇನೆ. ಮಹಾಪ್ರಭುಗಳು ಬರೀ ಟಾಟಾ ಮಾಡಿಕೊಂಡು ಓಡಾಡುತ್ತಾರೆ. ಹಿಟ್ಲರ್ ಮಾದರಿಯಲ್ಲಿ ಅಡ್ಡಾಡುತ್ತಾರೆ ಎಂದು ನಟ ಪ್ರಕಾಶ ರಾಜ್ ಹೇಳಿದರು.
ನಗರದಲ್ಲಿಂದು ಆಯೋಜಿಸಿದ್ದ ಸಂವಿಧಾನ ಸುರಕ್ಷಾ ಸಮಿತಿ ಮತ್ತು ಎದ್ದೇಳು ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ 27 ಜನರನ್ನು ಕಳಿಸಿದ್ದೆವು.
ಇಬ್ಬರು ರಾಜ್ಯಸಭಾ ಸದಸ್ಯರು ಇದ್ದರು. ಅದ್ರಲ್ಲಿ ಒಬ್ಬರು ಹಣಕಾಸು ಸಚಿವರಿದ್ದರು. ಈರುಳ್ಳಿ ಬೆಳೆ ಹೆಚ್ಚಾದರೆ ನಾನು ಅದನ್ನು ತಿನ್ನಲ್ಲ ಅಂತಾರೆ. ಒಬ್ಬರ ಪ್ರಕಾರ 2014 ಕ್ಕೆ ಸ್ವತಂತ್ರ ಬಂತಂತೆ. ಮಹಾ ಪ್ರಭುಗಳಿಗೆ ಸಂಸದರು ಬೇಕಿಲ್ಲ, ಬೇರೆ ಪಕ್ಷದ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಮ್ಯಾನಿಫೆಷ್ಟೋ ಅಂತಾರೆ. ಇವ್ರು ಬಾಯಿ ಬಿಟ್ಟರೆ ದುರ್ಗಂಧ, ಕಳ್ಳರು ದರೋಡೆಕೋರರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ..? ಭ್ರಷ್ಟರನ್ನು ಬಿಜೆಪಿ ಗೆ ಸೇರಿಕೊಳ್ಳುತ್ತಿದ್ದಾರೆ. ನಿಮ್ಮ ಪಕ್ಷವೇನಾದ್ರು ಜೈಲ್ ಆಗಿದೆಯಾ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರಿಗಳು ಬಿಜೆಪಿಗೆ ಸೇರಿದರೆ ಪರಿಶುದ್ಧರಾಗುತ್ತಾರೆ. ಈ ಮಹಾಪ್ರಭು ಬಿಜೆಪಿಯನ್ನೇ ಮುಳುಗಿಸ್ತಾರೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ. ಹೆದರದೆ ಎದುರಿಸೋಣ ಚುನಾವಣೆಯಲ್ಲಿ ಬರೀ ನಾವು ಗೆದ್ದರೆ ಸಾಲದು ಎಂದು ವಾಗ್ದಾಳಿ ನಡೆಸಿದರು.
ನಾರಿ ಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತೀರಿ. ಓಲಂಪಿಕ್ ಗೆದ್ದ ಬಂದ ಹೆಣ್ಣು ಮಕ್ಕಳಿಂದ ಸೆಲ್ಪಿ ತಗೆದುಕೊಳ್ಳಲು ಮೋದಿಗೆ ಗೊತ್ತು. ಆದ್ರೆ ಅದೇ ಹೆಣ್ಣು ಮಕ್ಕಳು ಎಂಪಿ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾನೆ ಅಂತ ಪ್ರತಿಭಟನೆ ಮಾಡಿದ್ರೆ ಅವರ ಮೇಲೆ ಪೊಲೀಸ್ ಕೇಸ್ ಹಾಕತ್ತೀರಾ ನಾಚಿಕೆ ಆಗಲ್ವಾ ನಿಮಗೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರ ಪಕ್ಷವನ್ನು ಕುಟುಂಬ ರಾಜಕಾರಣ ಪಕ್ಷ ಅಂತ ಬೈಯ್ದುದ್ದರು. ಆದ್ರೆ ಈಗ ಅವರ ಜೊತೆ ಎಲೆಕ್ಷನಗಾಗಿ ತಬ್ಬಿಕೊಂಡಿದ್ದಾರೆ. ಆದ್ರೆ ಈಗ ಪ್ರಜ್ವಲ್ ರೇವಣ್ಣ ಪ್ರಕರಣ ಬಂದ ತಕ್ಷಣ ನಮಗೂ ಆ ಕುಟುಂಬಕ್ಕೂ ಸಂಬಂಧವಿಲ್ಲ ಅಂತಾರೆ.
ಸರ್ಕಾರ ಮಹಿಳೆಯರಿಗೆ ಬಸ್ ಉಚಿತ ಮಾಡಿದಕ್ಕೆ ಮಹಿಳೆಯರು ದಾರಿ ತಪ್ಪಿದ್ದಾರೆ ಅಂತ ಅಣ್ಣ ಕುಮಾರಣ್ಣ ಹೇಳುತ್ತಾರೆ. ಆದ್ರೆ ಈಗ ನಿಮ್ಮ ಮಗ ದಾರಿ ತಪ್ಪಿದ್ದಾನಲ್ಲ, ಅವನನ್ನ ಕರೆದುಕೊಂಡ ಬಾ ಎಂದು ಕುಮಾರಸ್ವಾಮಿಗೆ ಕುಟುಕಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com