ಬೆಂಗಳೂರು: ಪಟ್ಟಣದ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್ ಶಾಪ್ ಮಾಲೀಕರು ಹಾಗು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ದ ಪದಾಧಿಕಾರಿಗಳು ಹಾಗು ಸದಸ್ಯರು, ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ನಿರ್ಮಾಪಕ, ನಿರ್ದೇಶಕ, ಸ್ಪರ್ಧಿ ಗಗನ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ಪ್ರೇಮ, ಹಾಗು ಇತರರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ರಿಯಾಲಿಟಿ ಶೋ ಸ್ಪರ್ಧಿ ಗಗನ ದೃಶ್ಯವೊಂದರ ನಟನೆಯಲ್ಲಿ ಮ್ಯಾಕಾನಿಕ್ ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು ಎಂಬ ಮಾತನ್ನು ಆಡಿದ್ದು, ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ.
ಶ್ರಮಿಕ ವರ್ಗದ ದುಡಿಮೆ, ವೃತ್ತಿ ಬಗ್ಗೆ ಕುಹೂಕ, ನಿಂದನೆಯ ಮಾತು ಆಡಿರುವ ಸ್ಪರ್ಧಿ ಹಾಗು ಇದಕ್ಕೆ ಉತ್ತೇಜನ ನೀಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.