ಅತಿಯಾಗಿ ಕೆಲಸ ಮಾಡುವ ಮಹಿಳೆಯರಲ್ಲಿ ಹೆಚ್ಚಾಗಿ ಸೊಂಟ ನೋವಿನ ಸಮಸ್ಯೆ ಕಾಡುತ್ತದೆ. ತುಂಬಾ ಕುಳಿತುಕೊಂಡು ಅಥವಾ ನಿಂತು ಕೆಲಸ ಮಾಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸೊಂಟ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ
ವ್ಯಾಯಾಮ ಮಾಡುವುದು ಪ್ರತಿಯೊಬ್ಬರಿಗೂ ಅವಶ್ಯಕ. ದಿನಕ್ಕೆ ಕನಿಷ್ಟ ಅರ್ಧಗಂಟೆಯಾದರು ವ್ಯಾಯಾಮ ಮಾಡಬೇಕು. ಸೊಂಟ ನೋವು ಇರುವವರು ಸೊಂಟ ನೋವಿಗೆ ಉತ್ತಮವಾದ ವ್ಯಾಯಾಮವನ್ನೇ ಮಾಡಿ. ಇದು ನಿಮ್ಮ ಮಾಂಸಖಂಡಗಳನ್ನು ಸಡಿಲಗೊಳಿಸುತ್ತದೆ.
ಒಂದು ಕಪ್ ಇಪ್ಸಮ್ ಉಪ್ಪನ್ನು ನಿಮ್ಮ ಬಾತ್ ಟಬ್‌ನ ನೀರಿನೊಂದಿಗೆ ಮಿಕ್ಸ್ ಮಾಡಿ ಇಪ್ಪತ್ತು ನಿಮಿಷ ಬಾತ್ ಟಬ್‌ನಲ್ಲಿ ಕೂತುಕೊಳ್ಳಿ. ಇದು ನಿಮ್ಮ ದೇಹದಲ್ಲಿನ ಊತವನ್ನು ಕಡಿಮೆ ಮಾಡುವುದಲ್ಲದೆ, ರಕ್ತಸಂಚಾರವನ್ನು ಸುಗಮವಾಗಿಸುತ್ತದೆ.
ಅರಿಶಿನದ ಹಾಲುನ್ನು ಮೈ-ಕೈ ನೋವು, ಅಥವಾ ಯಾವುದಾದರೂ ಗಾಯಗಳಾಗಿದ್ದಾಗ ಹೆಚ್ಚಾಗಿ ಕುಡಿಯಲು ಕೊಡುತ್ತಾರೆ. ಅದನ್ನುಕುಡಿಯುವುದರಿಂದ ನೋವು ಬೇಗನೆ ಗುಣವಾಗುತ್ತದೆ ಎನ್ನಲಾಗುತ್ತದೆ. ಸೊಂಟ ನೋವು ಇದ್ದಾಗಲೂ ಒಂದು ಗ್ಲಾಸ್ ಅರಿಶಿನ ಹಾಲು ಕುಡಿದರೆ ನೋವು ನಿವಾರಣೆಯಾಗುತ್ತದೆ. ಅದಕ್ಕಾಗಿ ನೀವು ಒಂದು ಗ್ಲಾಸ್ ಹಾಲಿಗೆ ಕಾಲು ಚಮಚ ಅರಿಶಿನ ಬೆರೆಸಿ ಕುಡಿಯಿರಿ.
ಆಲೂಗಡ್ಡೆಯ ಪೇಸ್ಟ್ ಗೆ ಬಿಲ್ವಪತ್ರೆಯ ತಿರುಳನ್ನು ಮಿಕ್ಸ್ ಮಾಡಿ ಸೊಂಟದ ಮೇಲೆ ಚೆನ್ನಾಗಿ ಮಸಾಜ್ ಮಾಡಿ, ಬಳಿಕ 20 ನಿಮಿಷ ಹಾಗೇ ಬಿಟ್ಟು ನಂತರ ಬಿಸಿಬಿಸಿ ನೀರಿನಿಂದ ಸ್ನಾನ ಮಾಡಿ. ಹೀಗೆ ಪ್ರತಿದಿನ ಮಾಡಿದರೆ ಸೊಂಟ ನೋವು ಬೇಗ ವಾಸಿಯಾಗುತ್ತದೆ.