ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ.
ತುಲಸಿಯ 1-3 ಚಿಗುರು ಕುಡಿಗಳನ್ನ ಕಪ್ಪು ಟೀಗೆ ಹಾಕಿ ಕುಡಿದರೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ,ಜ್ವರ ಬರುವುದನ್ನ ತಡೆಯುವುದು.
ತಲೆನೋವಿಗೆ ತುಳಸಿ ಎಲೆ ಹಾಗೂ ಗಂಧದ ಪೇಸ್ಟ್ ಮಾಡಿಕೊಂಡು ಹಣೆಗೆ ಹಚ್ಚಿಕೊಂಡರೆ ತಲೆ ನೋವು ಉಪಶಮನವಾಗುವುದು
ರಾತ್ರಿಕುರುಡು ಹಾಗೂ ಮಂದಕಣ್ಣಿನ ಸಮಸ್ಯೆ ಇದ್ದರೆ ಒಂದೆರಡು ಡ್ರಾಪ್ಸ್ ತುಳಸಿ ರಸವನ್ನು ಕಣ್ಣಿಗೆ ಹಾಕಿಕೊಳ್ಳಬೇಕು.
ಚಿಕ್ಕ ಮಕ್ಕಳ ಕೆಮ್ಮೆಗೆ,ಶೀತಕ್ಕೆ ವಾಂತಿ-ಭೇದಿ ಸಮಸ್ಯೆಗೆ ತುಳಸಿಯ ರಸ ರಾಮಬಾಣವಾಗಿದೆ. ತುಳಸಿಯಿಂದ ತೆಗೆದ ಎಣ್ಣೆಯು ಮೈ-ಕೈಗೆ ಹಚ್ಚಿಕೊಂಡರೆ ಮೈ-ಕೈ ನೋವಿಗೆ ಪರಿಹಾರವಾಗಿದೆ.
ತುಳಸಿ ಎಲೆ ಆಹಾರವನ್ನು ಉತ್ತಮವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ತುಳಸಿ ಎಲೆಯು ಹಲ್ಲಿನ ಎಲ್ಲಾ ತರಹದ ಬಾದೆಗೂ ರಾಮಬಾಣವಾಗಿದೆ,ಹಲ್ಲಿನ ವಸಡುಗಳನ್ನು ಆರೋಗ್ಯಕರವಾಗಿಡುತ್ತದೆ.
ತುಳಸಿಯ ತಾಜಾ ರಸವನ್ನು ಕಿವಿಗೆ ಹಾಕುವುದರಿಂದ ಕಿವಿನೋವಿನ ಸಮಸ್ಯೆಗೆ ಪರಿಹಾರವಾಗಿದೆ.ತುಳಸಿ ಮಿಶ್ರಣವನ್ನು ಎಲೆಗಳು ಮತ್ತು ಜೇನು ನೋಯುತ್ತಿರುವ ಗಂಟಲು ಕಾರಣವಾಗುತ್ತದೆ.