ಮಂಡ್ಯ: ಕಲೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಮಂಡ್ಯದಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿ ಸುಮಲತಾ ಗೆಲುವಿಗಾಗಿ ಜೋಡೆತ್ತುಗಳಂತೆ ನಟ ಯಶ್ ಹಾಗೂ ದರ್ಶನ್ ಕಾರ್ಯನಿರ್ವಹಿಸಿದ್ದರು. ಈಗ ಸುಮಲತಾ ಬಿಜೆಪಿಯಲ್ಲಿದರೂ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮಂಡ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಭರ್ಜರಿ ಪ್ರಚಾರ ನಡೆಸಿದ ನಟ ದರ್ಶನ್, ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ, ವ್ಯಕ್ತಿಯ ಪರವಾಗಿ ಬಂದಿದ್ದೇನೆ. ಶಾಸಕ ನರೇದ್ರ ಸ್ವಾಮಿ ಆಪ್ತರಾಗಿದ್ದು, ಅವರು ಹೇಳಿದ್ದಕ್ಕೆ ಸ್ಟಾರ್ ಚಂದ್ರು ಪರ ಪ್ರಚಾರ ನಟೆಸಿದ್ದೇನೆ. ಇದನ್ನು ಬೇರೆ ರೀತಿ ತಿಳಿದುಕೊಳ್ಳುವುದು ಬೇಡ ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿಗಳು ಮುಖ್ಯ ಎಂದರು.
ಇದೇ ವೇಳೆ ಲೋಕಸಭಾ ಚುನವಣೆಯಲ್ಲಿ ಎಲ್ಲರೂ ಬಂದು ಮತದಾನ ಮಾಡಿ, ನಿಮ್ಮ ಹಕ್ಕು ಚಲಾಯಿಸಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು. ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿಯಲ್ಲಿ ದರ್ಶನ್ ಸ್ಟಾರ್ ಚಂದ್ರು ಪರ ಮತಬೇಟೆ ನಡೆಸಿದ್ದಾರೆ.