ದ್ವಾರಕೀಶ್ ಅವರು ನಿರ್ಮಾಪಕನಾಗಿ ಸ್ಯಾಂಡಲ್ವುಡ್ನಲ್ಲಿಉತ್ತುಂಗಕ್ಕೆ ಏರಿದವರು. ವಿಷ್ಣುವರ್ಧನ್ ಜೊತೆ ಅವರು ಹಲವು ಸಿನಿಮಾ ಮಾಡಿ ಮಾಡಿ ಸಿನಿ ರಸಿಕರಿಂದ ಭೇಷ್ ಎನಿಸಿಕೊಂಡವರು.ಸಂದರ್ಶನವೊಂದರಲ್ಲಿ ‘ವಿಷ್ಣುವರ್ಧನ್ ಒಳ್ಳೆಯ ನಟ. ನಾನು ಒಳ್ಳೆಯ ನಿರ್ಮಾಪಕ. ಅವನಿಗೆ ಒಳ್ಳೆಯ ನಿರ್ಮಾಪಕ ಬೇಕಾಗಿತ್ತು. ನನಗೆ ಒಳ್ಳೆಯ ನಟ ಬೇಕಿತ್ತು. ಅದೇ ನಮ್ಮ ಒಡನಾಡಕ್ಕೆ ಕಾರಣವಾಯ್ತು’ ಎಂದು ದ್ವಾರಕೀಶ್ ಹೇಳಿಕೊಂಡಿದ್ದರು.
ನಟ, ನಿರ್ಮಾಪಕ, ನಿರ್ದೇಶಕರಾಗಿದ್ದ ದ್ವಾರಕೀಶ್ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ. ದ್ವಾರಕೀಶ್ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಅಪಾರ. ಬಹುತೇಕ ಎಲ್ಲ ಮಲ್ಟಿಸ್ಟಾರ್ಸ್ಗಳ ಜೊತೆ ಅವರು ಒಡನಾಟ ಹೊಂದಿದ್ದರು. ಕನ್ನ್ಡದ ಮೇರು ನಟ ಡಾ. ರಾಜ್ಕುಮಾರ್ ಜೊತೆಗೂ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್ ನಟಿಸಿದ್ದರು. ಆದರೆ ದ್ವಾರಕೀಶ್ ನಿರ್ಮಾಣದ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರ ರಾಜ್ಕುಮಾರ್ ನಟಿಸಿದ್ದರು. ನಂತರದಲ್ಲಿಅವರು ವಿಷ್ಣುವರ್ಧನ್ ಜೊತೆಗೆ ಹೆಚ್ಚು ಸಿನಿಮಾಗಳನ್ನು ಮಾಡಲು ಆರಂಭಿಸಿದರು.
ಆ ಕಾಲಘಟ್ಟದಲ್ಲೆ ಡಾ. ರಾಜ್ಕುಮಾರ್ ಅವರ ಕಾಲ್ಶೀಟ್ ಸಿಗೋದು ಅಷ್ಟು ಸುಲಭದ ಮಾತಲ್ಲ. 1960ರ ದಶಕದಲ್ಲಿ ಅವರು ಸಖತ್ ಬ್ಯುಸಿ ಇದ್ದಂತವರು. ದ್ವಾರಕೀಶ್ ಅವರು ಕೂಡ ಆಗತಾನೇ ನಿರ್ಮಾಪಕನಾಗಿ ಪಾದಾರ್ಪಣೆ ಮಾಡಿದವರು. ದ್ವಾರಕೀಶ್ ಆಗಿನ್ನೂ 25-26ರ ಪ್ರಾಯದ ಯುವಕ. ರಾಜ್ಕುಮಾರ್ ಜೊತೆ ನಟಿಸಿ ಫೇಮಸ್ ಆಗಿದ್ದರು ಕೂಡ , ನಿರ್ಮಾಪಕನಾಗಿ ಅವರ ಡೇಟ್ಸ್ ಪಡೆಯುವುದು ಸುಲಭದ ವಿಷಯವಾಗಿರಲ್ಲಿಲ್ಲ. ಹಾಗೋ ಹೀಗೋ ಡೇಟ್ಸ್ ಪಡೆದ ಪ್ರಚಂಡ ಕುಳ್ಳ ‘ಮೇಯರ್ ಮುತ್ತಣ್ಣ’ ಸಿನಿಮಾ ಮಾಡಿ ಸಕ್ಸಸ್ ಆದ್ರು.
ಅದಾದ ಸ್ವಲ್ಪ ಸಮಯದಲ್ಲೆ ‘ಭಾಗ್ಯವಂತರು’ ಸಿನಿಮಾವನ್ನು ನಿರ್ಮಿಸಿ ಭರ್ಜರಿ ಯಶಸ್ಸನ್ನ ಕಂಡ್ರು . ಅದಾದ ಬಳಿಕ ಮತ್ತೆ ಡಾ. ರಾಜ್ಕುಮಾರ್ ಸಿನಿಮಾಗಳಿಗೆ ದ್ವಾರಕೀಶ್ ಬಂಡವಾಳ ಹೂಡಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ, ಅದಾಗಲೇ ಪಾರ್ವತಮ್ಮ ರಾಜ್ಕುಮಾರ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ವಜ್ರೇಶ್ವರಿ ಕಂಬೈನ್ಸ್’ ಅನ್ನು ಆರಂಭಿಸಿದರು.ಹಾಗೂ ರಾಜ್ಕುಮಾರ್ ಅವರ ಎಲ್ಲ ಸಿನಿಮಾಗಳು ‘ವಜ್ರೇಶ್ವರಿ ಕಂಬೈನ್ಸ್’ ಮೂಲಕವೇ ನಿರ್ಮಾಣವಾಗಲು ಆರಂಭವಾದವು. ಹಾಗಾಗಿ ದ್ವಾರಕೀಶ್ ಅವರಿಗಾಗಲಿ ಅಥವಾ ಬೇರೆ ಯಾರೇ ನಿರ್ಮಾಪಕರಿಗಾಗಲಿ ಅಣ್ಣಾವ್ರ ಕಾಲ್ಶೀಟ್ ಸಿಗದಾಯಿತು.
ರಾಜ್ ಕುಮಾರ್ ಅವರ ನಂತರ ಛಾಪು ಮುಡಿಸಿದ ನಟ ಅಂದ್ರೆ ವಿಷ್ಣುವರ್ಧನ್. 1970ರ ದಶಕದಲ್ಲಿ ವಿಷ್ಣುವರ್ಧನ್ ಅವರು ಸ್ಟಾರ್ ನಟನಾದರು. ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರು ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ನಟಿಸಿ ಭರ್ಜರಿ ಜೋಡಿಗಳು ಮಾತ್ರವಲ್ಲದೆ, ಅವರಿಬ್ಬರು ಏಕವಚನದಲ್ಲಿ ಮಾತನಾಡಿಕೊಳ್ಳುವಷ್ಟು ಆಪ್ತಮಿತ್ರರಾದರು. ನಿರ್ಮಾಪಕನಾಗಿ ಸಕ್ರಿಯರಾಗಿದ್ದ ದ್ವಾರಕೀಶ್ ಅವರಿಗೆ ಈ ರೀತಿಯ ಸ್ಟಾರ್ ಕಲಾವಿದರ ಕಾಲ್ಶೀಟ್ ಅಗತ್ಯವಾಗಿ ಬೇಕಾಗಿತ್ತು. ಅತ್ತ ಡಾ. ರಾಜ್ಕುಮಾರ್ ಅವರ ಡೇಟ್ಸ್ ಸಿಗದಿದ್ದಾಗ, ಇತ್ತ ದ್ವಾರಕೀಶ್ ಅವರಿಗೆ ವಿಷ್ಣು ಅವರ ಕಾಲ್ಶೀಟ್ ಸುಲಭದಲ್ಲಿ ಸಿಗುವಂತಾಯಿತು. ಹಾಗಾಗಿ ಅವರು ವಿಷ್ಣುಗಾಗಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದರು.