ಲಕ್ಷ್ಮೇಶ್ವರ ಠಾಣೆಯ ಮನೆಗಳ್ಳತನದ 2: ಪಟ್ಟಣ ಸೇರಿದಂತೆ ರಾಮಗಿರಿ, ಪುಟಗಾಂವ್ಬಡ್ನಿ ಗ್ರಾಮಗಳಲ್ಲಿ ಮನೆಗಳ್ಳತನ ಮಡುತ್ತಿದ್ದ ಇಬ್ಬರು ಕಳ್ಳರನ್ನು ಲಕ್ಷ್ಮೇಶ್ವರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹ 1.39 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹನಮಂತಪ್ಪ ಟೋಳೆಪ್ಪ ಕುಂಚಿಕೊರವರ ಮತ್ತು ಮಂಜುವನಾಥ ಲಕ್ಷ್ಮಣ ಬಿಸಕಲ್ಲುವಡ್ಡರ ಬಂಧಿತ ಕಳ್ಳರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಮತ್ತು ಸಿಪಿಐ ವಿಕಾಸ ಲಮಾಣಿ ಅವಅರ ಮಾರ್ಗದರ್ಶನದಲ್ಲಿ ಪಿಎಸ್ಐ ಯೊಸೆಫ್ ಜಮೂಲಾ ಮತ್ತು ಕ್ರೈಮ್ ಪಿಎಸ್ಐ ವಿ.ಜಿ. ಪವಾರ ನೇತೃತ್ವದಲ್ಲಿ ಕಳ್ಳರ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ.