ದಾವಣಗೆರೆ: 28 ಲೋಕಸಭೆ ಗೆಲ್ಲಲ್ಲು ಪ್ರಯತ್ನ ಮಾಡುತ್ತಿದ್ದು ನಿಶ್ಚಿತವಾಗಿ ಗುರಿ ಮುಟ್ಟುತ್ತೇವೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಹೇಳಿದರು.
ನಗರದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಸ್ಟಿ ವಿರೋಧಿಯಾಗಿದೆ ಎಂಬುದಕ್ಕೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲಾ.
ದೆಹಲಿಯಲ್ಲಿ ಅವರ ಶವ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲಾ.ನೆಹರು,ಇಂದಿರಾಗಾಂಧಿ ಅವರ ಸಮಾಧಿಗೆ ಜಾಗ ಕೊಟ್ಟು ಅಂಬೇಡ್ಕರ್ ಅವರ ಸಮಾಧಿಗೆ ಜಾಗ ಕೊಡದೆ ಅಪಮಾನ ಮಾಡಿದ್ದಾರೆ.
ಅಂಬೇಡ್ಕರ್ ಗೆ ಮೋದಿ ಸರ್ಕಾರ ಹೇಗೆ ಗೌರವ ಕೊಟ್ಟಿದೆ ಎಂದರೆ ಅವರ ಮನೆಯನ್ನು ಅಭಿವೃದ್ದಿ ಮಾಡಿ ಮನೆಯನ್ನು ಮ್ಯೂಜಿಯಂ ಮಾಡಲಾಗಿದೆ ಎಂದರು.
ಈಗಾಗಲೇ 23 ಕ್ಷೇತ್ರ ಸುತ್ತಾಡಿದ್ದು, ಇನ್ನುಳಿದ ಐದು ಕ್ಷೇತ್ರ ಬಾಕಿ ಇದ್ದು 28 ಗೆಲ್ತೇವೆ. ದಾವಣಗೆರೆಯಲ್ಲಿ ನಮ್ಮಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವುದು ನಿಶ್ಚಿತ.ನಾಮಪತ್ರ ಸಲ್ಲಿಸಲು ಬರಲು ಪ್ರಯತ್ನ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಸ್ನೇಹಿತರಿಗೆ ಮತದಾರರೆ ಉತ್ತರ ಕೊಡ್ತಾರೆ ಚುನಾವಣೆ ಮುಗಿದ ಮೇಲೆ ಎಲ್ಲಿರುತ್ತೇ ನೋಡಿ.ಕಾಂಗ್ರೆಸ್ ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ…? ನರೇಂದ್ರ ಮೋದಿ ಅವರು ಮತ್ತೇ ಪ್ರಧಾನಿಯಾಗುತ್ತಾರೆ.
ಹಾಲು ಜೇನಿನಂತೆ ಜೆಡಿಎಸ್ ಹೊಂದಾಗಿರುತ್ತದೆ, ಯಾವುದೇ ಸಣ್ಣ ಗೊಂದಲಕ್ಕೂ ಎಡೆ ಮಾಡಿಕೊಡುವುದಿಲ್ಲಾ ಎಂದರು.ಬರಗಾಲದ ಸಂದರ್ಭದಲ್ಲಿ ಅವರ ನೆರವಿಗೆ ಬರುವುದು ನಮ್ಮ ಕರ್ತವ್ಯ ನಾವು ಅದನ್ನು ಮಾಡ್ತೀವಿ.. ದೇವೆಗೌಡ್ರು ಈ ವಯಸ್ಸಿನಲ್ಲಿ ಓಡಾಡುತ್ತಿದ್ದಾರೆ, ಕೇವಲ ಲೋಕಸಭೆಯಲ್ಲಾ ಮುಂಬರುವ ಎಲ್ಲಾ ಚುನಾವಣೆಯಲ್ಲಿ ನಾವು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದೇವೆ.
ಯಾವ ಗ್ಯಾರಂಟಿ ಎಫೆಕ್ಟ್ ಆಗುವುದಿಲ್ಲಾ ಈಶ್ವರಪ್ಪ ನವರ ಮೇಲೆ ಕ್ರಮ ಪಕ್ಷ ತೀರ್ಮಾನ ಮಾಡುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದೆ ಎಂದು ಯಡಿಯೂರಪ್ಪ ತಿಳಿಸಿದರು.


