ಬೆಂಗಳೂರು : ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ತಾಂತ್ರಿಕ ಸಲಹಾ ಸಮಿತಿ ಸಲಹೆಗಳ ಮೇಲೆ ಚರ್ಚೆ ಮಾಡಿ ಅಧಿಕೃತ ಪ್ರಕಟಣೆ ಮಾಡ್ತೀವಿ ಹಾಗೂ ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅದರ ಪ್ರಕಟಣೆ ಮಾಡ್ತೇವೆ ಎಂದು ಹೇಳಿದರು.
ಕೋವಿಡ್ ರೂಪಾಂತರಿ ಜೆಎನ್೧ ಬಗ್ಗೆ ಆತಂಕ ಪಡುವ ಯಾವ ಅಗತ್ಯವೂ ಇಲ್ಲ. ಕರ್ನಾಟಕದಲ್ಲಿ ಇನ್ನೂ ಹೊಸ ತಳಿ ದೃಢಪಟ್ಟಿಲ್ಲ. ತೀವ್ರ ಹಾನಿಕಾರಕ ಅಂತ ಕೂಡ ಇದುವರೆಗೆ ಯಾರೂ ಹೇಳಿಲ್ಲ. ಕೋವಿಡ್ ರೂಪಾಂತರಿ ಜೆಎನ್೧ ಮೇಲೆ ನಿಗಾ ವಹಿಸುತ್ತೇವೆ. ಇಲಾಖೆಯ ಎಲ್ಲ ಕೇಂದ್ರಗಳು ಸಜ್ಜಾಗಿರುವಂತೆ ಸೂಚಿಸಿದ್ದೇವೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕೋವಿಡ್ನಿಂದ ಉಳಿದ ಖಾಯಿಲೆಗಳಿಂದ ರಕ್ಷಣೆಗೆ ಮಾಸ್ಕ್ ಧರಿಸಲು ಹೇಳಿದ್ದೇವೆ. ಟೆಸ್ಟಿಂಗ್ ಹೆಚ್ಚಳ ಮಾಡಲು ಸೂಚಿಸಲಾಗಿದೆ. ಹೊಸದಾಗಿ ಆರ್.ಟಿಪಿಸಿಆರ್ ಕಿಟ್ ಖರೀದಿಗೆ ನೇರವಾಗಿ ಖರೀದಿ ಮಾಡಲು ಡಿಸಿಗಳಿಗೆ ಸೂಚಿಸಿದ್ದೇವೆ. ಎಷ್ಟರ ಮಟ್ಟಿಗೆ ಕೋವಿಡ್ ಹರಡಿದೆ ಎಂದು ಗೊತ್ತಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.