ಧಾರವಾಡ: ಬಿಸಿಲಿನ ತಾಪದಿಂದ ಬೇಸತ್ತ ಪೇಡಾ ನಗರಿ ಜನತೆಗೆ ತಡವಾಗಿಯಾದ್ರೂ ಮಳೆರಾಯ ರಾತ್ರಿ ತಂಪೇರೆದಿದ್ದಾನೆ. ಮದ್ಯಾಹ್ನಾದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ತಡ ಸಂಜೆ ವೇಳೆ ಜಿಟಿಜಿಡಿ ಮಳೆ ಬಂದು ನಗರದ ಜನತೆಗೆ ತಂಪೇರೆಯುವುದರ ಜೊತೆಗೆ ಹಲವು ಅವಾಂತರ ಸೃಷ್ಟಿ ಮಾಡಿದೆ.
ಪೇಡಾನಗರಿ ಧಾರವಾಡದ ಜನತೆ ತಡ ಸಂಜೆ ವೇಳೆ ಮಳೆರಾಯ ಸಿಂಚನ ಮಾಡುವ ಮೂಲಕ ತಂಪೇರೆದಿದ್ದು, ನಗರದ ಹಲವು ಕಡೆಗಳಲ್ಲಿ ಸಂಚಚಾರ ಅಸ್ತವ್ಯಸ್ತ್ ಕಂಡು ಬಂದಿತ್ತು. ಜನತೆಗೆ ಒಂದು ಕಡೆ ವರುಣರಾಯ ತಂಪೇರೆದ್ದರೆ ಇನ್ನೊಂದು ಕಡೆ ಮಳೆರಾಯ ಅರ್ಭಟಕ್ಕೆ ನಗರದ ಟೋಲ್ ನಾಕಾ ಬಳಿ ರಸ್ತೆ ಜಲಾವೃತವಾಗಿ, ಸಂಚಾರ ಅಸ್ಯವ್ಯಸ್ಯ್‌ವಾಗಿತ್ತು.
ಅಲ್ಲದೆ ಒಂದು ಬೈಕ್ ನೀರಿನಲ್ಲಿ ತೇಲುತ್ತಿದ್ದು, ವಾಹನ ಸವಾರರಿಗೆ ಮಳೆರಾಯನ ಆಗಮನ ಆತಂಕ ಸೃಷ್ಟಿ ಮಾಡಿತ್ತು. ಇನ್ನೂ ಮಳೆರಾಯನ ಆಗಮನದಿಂದ ರೈತರು ಮೊಹದಲ್ಲಿ ಮಂದಹಾಸ ಮೂಡಿದ್ದು, ಜನರಗ ಕೆಲ ಕಡೆಗಳಲ್ಲಿ ವರುಣರಾಯ ಅವಾಂತರ ಸೃಷ್ಟಿ ಮಾಡಿದ ಘಟನೆಗಳು ವರದಿಯಾಗಿವೆ.
ಒಟ್ಟಿನಲ್ಲಿ ಬಿಸಿಲಿನ ತಾಪದಿಂದ ತತ್ತರಿಸಿದ ಪೇಡಾನಗರಿ ಜನತೆಗೆ ಶನಿವಾರ ಸುಂಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಮಳೆರಾಯ ತಂಪೇರೆದಿದ್ದು, ಕೆಲಕಾಲ ವಾಹನ ಸವಾರರು ಪರದಾಡಬೇಕಾಗಿತದೆ.