ಹುಬ್ಬಳ್ಳಿ: ಧಾರವಾಡದಲ್ಲಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ತೆರಳುತ್ತೇನೆ 15 ರಂದು ನಾಮ ಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಹೇಳಿದರು.
ಮಾಧ್ಯಮಗಳೂಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಸೇರಿ ರಾಜ್ಯ ಮಟ್ಟದ ಹಲವು ನಾಯಕರು ಭಾಗಿಯಾಗುತ್ತಾರೆ.ಭವ್ಯ ಮೆರವಣಿಗೆ ಮೂಲಕ ತೆರಳಲಾಗುವುದು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬೆಂಬಲಿಗರು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜೋಶಿ ತಿಳಿಸಿದರು.
ನಂತರ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿ ಅಲ್ಲಾ ಪ್ರಚಾರ ಮಂತ್ರಿ ಎಂದು ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ ಕೂಡ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.
ನಿಮ್ಮ ತಂದೆಯವರ ಅಧ್ಯಕ್ಷತೆಯಲ್ಲಿರೋ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ತಿಳಿದುಕೊಳ್ಳಿ,ಪ್ರಿಯಾಂಕ ಖರ್ಗೆಯವರು ಬೇರೆ ಪಕ್ಷಗಳ ಬಗ್ಗೆ ನೋಡುವುದು ಬಿಟ್ಟು ನಿಮ್ಮದನ್ನು ಗಮನಿಸಿ, ರಾಜಕೀಯ ತೆವಲಿಗಾಗಿ ಪ್ರಿಯಾಂಕ ಖರ್ಗೆ ಹೀಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ರಾಹುಲ್ ಗಾಂಧಿಯನ್ನು ಹಲವು ಬಾರಿ ಹೊಸ ಬಟ್ಟೆ ಹಾಕಿ ಲಾಂಚ್ ಮಾಡುತ್ತಾರೆ, ಆದರೆ ಫೆಲ್ ಆಗುತ್ತಾರೆ ಈಗಾಗಲೇ ಎರಡು ಬಾರಿ ಫೆಲ್ ಆಗಿದ್ದಾರೆ ಎಂದರು.
ದಿಂಗಾಲೇಶ್ವರ ಶ್ರೀಗಳ ಬಗ್ಗೆ ನಾನೇನು ಹೆಚ್ಚು ಮಾತಾಡುವುದಿಲ್ಲ,ನಿರಾಣಿ ಮತ್ತು ನಮ್ಮ ಪಕ್ಷದವರು ಯಾರು ಮಾತಾಡತ್ತಾರೆ ಮಾತಾಡಲಿ, ಶ್ರೀಗಳ ಬಗ್ಗೆ ನಾನು ಈ ಹಿಂದಿನಿಂದಲೂ ಮಾತಾಡುವುದಿಲ್ಲ ಅಂದಿದೆ
ಈಗಲೂ ಅದನ್ನೇ ಹೇಳುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.