Wednesday, April 30, 2025
30.3 C
Bengaluru
LIVE
ಮನೆರಾಜ್ಯ75 ಕೆಜಿ ಭಾರ ಎತ್ತಿದ 9 ವರ್ಷದ ಹುಡುಗಿ ; ಹರಿಯಾಣ ಬಾಲಕಿಯ ಸಾಧನೆ

75 ಕೆಜಿ ಭಾರ ಎತ್ತಿದ 9 ವರ್ಷದ ಹುಡುಗಿ ; ಹರಿಯಾಣ ಬಾಲಕಿಯ ಸಾಧನೆ

ಹರಿಯಾಣ: ನಂಬಲು ಕಷ್ಟವಾಗಬಹುದು ಆದರೆ ನಿಜ ವೇಯ್ಟ್‌ ಲಿಫ್ಟಿಂಗ್‌ನಲ್ಲಿ ತನ್ನದೇ ಆದ ಸಾಧನೆ ಮಾಡಿರುವ ಹುಡುಗಿ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ ಈಕೆಯ ವಿಡಿಯೋ ಈಗ ಎಲ್ಲ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸದ್ಯ ಇಂಟರ್‌ನೆಟ್‌ನಲ್ಲಿ ಹಲವಾರು ಫಿಟ್ನೆಸ್ ವಿಡಿಯೋಗಳು ಕಾಣಸಿಗುತ್ತವೆ. ಆದರೆ ಇಲ್ಲೊಬ್ಬಳು ಹುಡುಗಿಯ ಅದ್ಭುತ ಶಕ್ತಿ ಹಾಗೂ ಸಾಧನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹರಿಯಾಣದ ಪಂಚಕುಲದ 9 ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ತನ್ನ ಅದ್ಭುತ ಶಕ್ತಿ ಮತ್ತು ದೃಢಸಂಕಲ್ಪದಿಂದ ವೇಟ್‌ಲಿಫ್ಟಿಂಗ್ ಜಗತ್ತಿನಲ್ಲಿ ಅಲೆಗಳನ್ನು ಎಬ್ಬಿಸಿದ್ದಾಳೆ. ಈ ಹುಡುಗಿ 75 ಕೆಜಿ ಡೆಡ್‌ಲಿಫ್ಟ್ ಮಾಡುವ ವಿಡಿಯೋ ವೈರಲ್ ಆಗಿದೆ.

ಆರಂಭದಲ್ಲಿ ಫೆಬ್ರವರಿ 29 ರಂದು ಅರ್ಷಿಯಾ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಈ ವಿಡಿಯೋ ಬೇರೆ ಬೇರೆ ಖಾತೆಯಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ.

https://twitter.com/Visionaledge/status/1776839458546962801

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments