ಮುಂಬೈ : ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಸೇರಿದ ಬಳಿಕ ಕಂಗನಾ ಲಕ್ ಬದಲಾಗಿದ್ದು, ಎಂ ಪಿ ಅಭ್ಯರ್ಥಿ ಕಂಗನಾ ರಣಾವತ್ ಇದೀಗ ಐಷಾರಾಮಿ ಕಾರು ಖರೀದಿಸಿದ್ದಾರೆ.

‘ಮರ್ಸಿಡಿಸ್ ಮೆಬ್ಯಾಕ್ ಜಿಎಲ್ಎಸ್’ ಕಾರು ಕಂಗನಾ ರಣಾವತ್ ಮನೆಯ ಸೇರಿದೆ. ಈ ಕಾರಿನ ಬೆಲೆ ಬರೋಬ್ಬರಿ 2.46 ಕೋಟಿ ರೂಪಾಯಿ ಇದೆ. ವೈಟ್ ಡ್ರೆಸ್ ತೊಟ್ಟು ಮುಂಬೈನಲ್ಲಿ ಕಾಣಿಸಿಕೊಂಡ ಕಂಗನಾ ಹೊಸ ಕಾರಿನಲ್ಲಿ ರೌಂಡ್ಸ್ ಹಾಕುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.


