ದಾವಣಗೆರೆ : ದೊಡ್ಮನೆ ಹುಡುಗ ಯುವ ರಾಜಕುಮಾರ್ ಅಭಿನಯದ ಯುವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಇಂದು ಚಿತ್ರ ತಂಡ ದಾವಣಗೆರೆ ನಗರದ ಅಶೋಕ ಚಿತ್ರಮಂದಿರಕ್ಕೆ ಆಗಮಿಸಿತ್ತು. ಯುವ ಚಿತ್ರದ ನಾಯಕ ನಟ ಯುವ ರಾಜಕುಮಾರ್ ಹಾಗೂ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಅವರು ಚಿತ್ರ ಮಂದಿರಕ್ಕೆ ಆಗಮಿಸಿದ್ದರು.
ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮೂಗಿ ಬಿದ್ದರು. ಇದರಿಂದಾಗಿ ಕೇಲವು ಕಡೆ ನೂಕು ನುಗ್ಗಲು ಉಂಟಾಯಿತು.ಚಿತ್ರತಂಡ ಅಶೋಕ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಆತ್ಮೀಯವಾಗಿ ಬರ ಮಾಡಿಕೊಂಡಿದ್ದು ಅಭಿಮಾನಿಗಳ ಪ್ರೀತಿ ಕಂಡು ಚಿತ್ರ ತಂಡ ಹರ್ಷಗೊಂಡರು.