ಬಾಗಲಕೋಟೆ: ಕೃಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಿಹಿಸಿ ಜಮಖಂಡಿಯಲ್ಲಿ ಶಾಸಕ ಸಿದ್ದು ಸವದಿ ಹಾಗೂ ಜಗದೀಶ ಗುಡುಗುಂಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಹಾರಾಷ್ಟ್ರದ ಕೊಯಿನಾ ಜಲಾಶಯದಿಂದ ಕರ್ನಾಟಕದ ಕೃಷ್ಣಾ ನದಿಗೆ 4 ಟಿ.ಎಂ.ಸಿ. ನೀರು ಹರಿಸುವಂತೆ ಒತ್ತಾಯಿಸಿದ್ರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಉಪವಿಭಾಗ ಅಧಿಕಾರಿಗಳ ಕಚೇರಿಯ ಮುಂದೆ ಶಾಸಕರು ಹಾಗೂ ನೂರಾರು ರೈತರು ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಅವರು, ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿದೆ. ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತೆ ಸ್ಥಿತಿ ನಿರ್ಮಾಣವಾಗಿದೆ. ಜೂನ್- ವರೆಗೆ ಕೃಷ್ಣಾ ನದಿಗೆ ಕೊಯಿನಾ ಜಲಾಶಯದಿಂದ 4 ಟಿ.ಎಂ.ಸಿ. ನೀರನ್ನ ಹರಿಸಬೇಕು. ಪ್ರತಿ ದಿನ ಏಳು ಘಂಟೆಗೆ ವಿದ್ಯುತ್ ನೀಡಬೇಕು ಎಂದು ಜಮಖಂಡಿ ಉಪವಿಭಾಗ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.


