ಕೊಪ್ಪಳ : ಮಹಿಳೆಯ ಕೈ ಮೇಲೆ ಸಾರಿಗೆ ಸಂಸ್ಥೆ ಬಸ್ ಹರಿದಮತಹ ಘಟನೆ ಕೊಪ್ಪಳ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಸೀಟ್ ಹಿಡಿಯಲು ಹೋಗಿ ನೂಕು ನುಗ್ಗಲಿನಲ್ಲಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಖಾಸಿಂಬೀ ಕಾರಟಗಿ ಅನ್ನೋ ಮಹಿಳೆಯ ಕೈ ಮೇಲೆ ಬಸ್ ಹರಿದಿದೆ. ಆ ಮಹಿಳೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಯಾಗಿದ್ದಾರೆ.
ಕೊಪ್ಪಳದಿಂದ ಸಿದ್ದಾಪುರಕ್ಕೆ ಹೋಗಲು, ಬಸ್ ಹತ್ತಲು ಖಾಸಿಂಬೀ ಮುಂದಾಗಿದ್ದರು. ಆದರೆ ಚಾಲಕನ ನಿರ್ಲಕ್ಷ್ಯ ದಿಂದಲೇ ಘಟನೆ ಸಂಭವಿಸಿದೆ ಎಂದು ಆರೋಪ ಕೆಳಿಬರ್ತಿದೆ. ಗಾಯಾಳು ಖಾಸಿಂಬೀ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.