ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಸೀಸನ್ 4 ರಲ್ಲಿ ಭಾಗವಹಿಸುವ ಆರು ತಂಡಗಳ ಜೆರ್ಸಿಯನ್ನುಇಂದು ಬಿಡುಗಡೆಗೊಳಿಸಲಾಯಿತು.

ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಡಾ. ಶಿವರಾಜ್ ಕುಮಾರ್, ಹಾಗೂ ಗೀತಾ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್, ಗಣೇಶ್ ಮತ್ತು ಧನಂಜಯ್ ಭಾಗವಹಿಸಿದ್ದರು.

ಕನ್ನಡ ಚಲನಚಿತ್ರ ಕಪ್ ಸೀಸನ್ 4 ಡಿಸೆಂಬರ್ 23 ರಿಂದ ಪ್ರಾರಂಭವಾಗಿ ಡಿಸೆಂಬರ್ 25 ವರೆಗೆ ನಡೆಯಲಿದೆ , ಮೂರು ದಿನಗಳ ಕಾಲ ಚಿನ್ನಸ್ವಾಮಿ ಕ್ರೀಡಾಂಗಣ ಸೆಲೆಬ್ರಿಟಿಗಳ ರೋಚಕ ಕ್ರಿಕೆಟ್ ನಡೆಯಲಿದೆ ವಿಕ್ಷಕರು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

6 ತಂಡಗಳ ವಿವರ ಹೀಗಿದೆ
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ – ರಾಷ್ಟ್ರಕೂಟ ಪ್ಯಾಂಥರ್ಸ್
ರಿಯಲ್ ಸ್ಟಾರ್ ಉಪೇಂದ್ರ – ಒಡೆಯರ್ ಚಾರ್ಜರ್ಸ್
ಕಿಚ್ಚ ಸುದೀಪ್ – ಹೊಯ್ಸಳ ಈಗಲ್ಸ್
ಗೋಲ್ಡ್ ಸ್ಟಾರ್ ಗಣೇಶ್ – ಗಂಗಾ ವಾರಿಯರ್ಸ್
ದುನಿಯಾ ವಿಜಯ್ – ವಿಜಯನಗರ ದೇಶಪ್ರೇಮಿಗಳು
ಡಾಲಿ ಧನಂಜಯ್ – ಕದಂಬ ಲಯನ್ಸ್