ಬೆಂಗಳೂರು : ತಮಿಳಿನ ಹಾಸ್ಯ ನಟ ವಿವೇಕ್ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರತ್ ಎಂಬುವವರ ಜೊತೆ ಸರಳವಾಗಿ ವಿವೇಕ್ ಅವರ ಪುತ್ರಿ ಮದುವೆಯಾಗಿದ್ದಾರೆ. ಮಾ.28ರಂದು ಭರತ್ ಎಂಬುವವರ ಜೊತೆ ವಿವೇಕ್ ಪುತ್ರಿ ತೇಜಸ್ವಿನಿ ಚೆನ್ನೈನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ನಟ ವಿವೇಕ್ ಅವರು ಪರಿಸರ ಪ್ರೇಮಿಯಾಗಿದ್ದರು. ತಂದೆಯ ಆಸೆಯಂತೆಯೇ ಮದುವೆಯ ದಿನ ತೇಜಸ್ವಿನಿ ಗಿಡ ನೆಟ್ಟಿದ್ದಾರೆ. ಅದಷ್ಟೇ ಅಲ್ಲ, ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ವಿತರಿಸಿದ್ದಾರೆ. ವಿವೇಕ್ ಅವರು ಕೇವಲ ನಟನಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಪ್ರಗತಿಪರ ಚಿಂತನೆಗಳನ್ನ ಹಾಸ್ಯದ ಮೂಲಕ ವಿವೇಕ್ ಹೇಳುತ್ತಿದ್ದರು.