ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಸೋಮವಾರಪೇಟೆಯ ಇಓ ಜಯಣ್ಣ ಮನೆ ಮೇಲೆ ರೈಡ್ ಮಾಡಿದ್ದಾರೆ. ಕುಶಾಲನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಮನೆ ಹಾಗೂ ದ.ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.
ಅಸಿಟೆಂಟ್ ಇಂಜಿನಿಯರ್ ಫಯಾಜ್ ಅಹಮದ್ ಮನೆಯಲ್ಲೂ ತಲಾಶ್ ಮಾಡಲಾಗಿದೆ. ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿನ ಫಯಾಜ್ ಮನೆ. ಇಂಜಿನಿಯರ್ ಗೆ ಸೇರಿದ ಸೋಮವಾರಪೇಟೆ ಕಚೇರಿ, ಕುಶಾಲನಗರ ಮನೆ ಹಾಗೂ ಮಡಿಕೇರಿಯಲ್ಲಿರುವ ಅತ್ತೆ ಮನೆಯಲ್ಲೂ ಕೂಡ ಹುಡುಕಾಟ ನಡೆಸ್ತಿದ್ದಾರೆ.
ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಶೋಧ ಕಾರ್ಯ ನಡಿತಾ ಇದೆ.