Friday, January 30, 2026
17.8 C
Bengaluru
Google search engine
LIVE
ಮನೆUncategorizedರಂಗನಾಥ್​ ಮನೆ ಮೇಲೆ ಲೋಕಾ ದಾಳಿ ; ಸಿಕ್ಕಿದ್ದೆಷ್ಟು ಹಣ ಗೊತ್ತಾ??

ರಂಗನಾಥ್​ ಮನೆ ಮೇಲೆ ಲೋಕಾ ದಾಳಿ ; ಸಿಕ್ಕಿದ್ದೆಷ್ಟು ಹಣ ಗೊತ್ತಾ??

ಬೆಂಗಳೂರು : ರಾಜ್ಯದ 58 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಪಾಲಿಕೆ ಚೀಫ್​ ಎಂಜಿನಿಯರ್ ರಂಗನಾಥ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.

ಬ್ಯಾಟರಾಯನಪುರ ಯಲಹಂಕ ವಲಯದ ಅಧಿಕಾರಿಗಳು ರಂಗನಾಥ್ ಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ
13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿ 25 ಪಿಐ ಸೇರಿದಂತೆ 130 ಅಧಿಕಾರಿಗಳಿಂದ ಲೋಕಾಯುಕ್ತ ದಾಳಿ ನಡೆದಿದೆ. ಯಲಹಂಕ ವಲಯದ ಮುಖ್ಯ ಇಂಜಿನಿಯರ್ ರಂಗನಾಥ್ ಮನೆ ಮೆಲೆ ದಾಳಿ ನಡೆಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಯಲಹಂಕದಲ್ಲಿ ಚೀಫ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರೋ ರಂಗನಾಥ್ ಯಲಹಂಕಕ್ಕೂ ಮುಂಚೆ ದಾಸರಹಳ್ಳಿ ವಲಯದಲ್ಲಿ ಚೀಫ್ ಇಂಜಿನಿಯರ್ ಆಗಿದ್ದರು. 20 ಕ್ಕೂ ಹೆಚ್ಚು ಅಧಿಕಾರಿಗಳಿಂದ ಚೀಫ್ ಇಂಜಿನಿಯರ್ ರಂಗನಾಥ್ ಮನೆ ಮೇಲೆ ದಾಳಿ ಆಗಿದೆ. ಕಾರ್ಯಾಚರಣೆಯಲ್ಲಿ 549ಗ್ರಾಂ ಬಂಗಾರ, 420ಗ್ರಾಂ ಬೆಳ್ಳಿ, 798000ರೂ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸದಾಶಿವನಗರದ ಮನೆಗೆ 5 ಅಧಿಕಾರಿಗಳಿಂದ ದಾಳಿಯಾಗಿದ್ದು ಬೆಳಗ್ಗೆ 7 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಎರಡು ಗಂಟೆಗಳ ಸತತ ಕಾರ್ಯಾಚರಣೆಯನ್ನ ನಡೆಸಿದ್ದಾರೆ. ಯಲಹಂಕ‌ ನ್ಯೂ ಟೌನ್ 12 ಕ್ರಾಸ್ ನಲ್ಲಿರೋ ಮೂರು ಅಂತಸ್ತಿನ ಭವ್ಯ ಬಂಗಲೆ. ಸತತ 4 ಗಂಟೆಗಳಿಂದ ಮನೆಗೆ ತಿಂಡಿ‌ ಪಾರ್ಸಲ್ ತರಿಸಿಕೊಂಡು ಶೋಧ ಕಾರ್ಯ ಮಾಡಿದ್ದಾರೆ ಹಾಗೂ ಮನೆಗೆ ಅಕ್ಕಸಾಲಿಗ ಹಾಗೂ ಚಿನ್ನ ತೂಕ ಮಾಡುವ ಮೆಷಿನ್​ನನ್ನು ಸಹ ಅಧಿಕಾರಿಗಳು ತರೆಸಿಕೊಂಡು ಕಾರ್ಯಾಚರಣೆಯನ್ನ ನಡೆಸಿ ಸಿಕ್ಕಂತಹ ವಸ್ತುಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments