ಚಿಕ್ಕೋಡಿ : ರಾಜ್ಯ ಸಧ್ಯ ಬರಗಾಲದಿಂದ ತತ್ತರಿಸುತ್ತಿದೆ. ಆದ್ರೆ ಇತ್ತ ಚಿಂತೆ ಇಲ್ಲದ ಕೋಣ ಸಂತೆಲಿ ನಿದ್ದೆ ಮಾಡಿತಂತೆ ಎಂಬಂತೆ ಅಸಿಸ್ಟೆಂಟ್ ಇಂಜೀನಿಯರ್ ಸಂಜಯಕುಮಾರ್ ಅಮ್ಮಿನಭಾವಿ ಎಂಬ ಅಧಿಕಾರಿ ಒಬ್ರು ಕರ್ತವ್ಯದಲ್ಲಿದ್ದಾಗಲೇ ಗಡತ್ತಾಗಿ ನಿದ್ದೆ ಹೊಡೆಯುತ್ತಿದ್ದಾರೆ.
ಈ ರೀತಿಯ ಬೇಜವಾಬ್ದಾರಿ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಘಟಪ್ರಭಾ ಎಡದಂಡೆ ಕಾಲುವೆಯ ನೀರಾವರಿ ಉಪವಿಭಾಗ ಕಚೇರಿಯಲ್ಲಿ. ಕಚೇರಿಯಲ್ಲಿ ನಿದ್ದೆ ಮಾಡಬೇಡಿ ಎಂದು ಮುಖ್ಯ ಇಂಜೀನಿಯರ್ ಅದೆಷ್ಟೋ ಬಾರಿ ಹೇಳಿದ್ರು ಈ ಆಸಾಮಿ ಕಿವಿ ಮೆಲೆ ಹಾಕೊಳ್ದೆ ಕುಂಭಕರ್ಣನಂತೆ ನಿದ್ದೆಗೆ ಜಾರ್ತಾನಂತೆ. ಬೇಜವಾಬ್ದಾರಿ ಅಧಿಕಾರಿಯ ನಡೆಗೆ ರೈತಾಪಿ ವರ್ಗದಿಂದ ಆಕ್ರೋಶ ವ್ಯಕ್ತವಾಗ್ತಾ ಇದೆ.


