ಮೈಸೂರು : ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಇತಿಹಾಸ ಪ್ರಸಿದ್ಧ ಗುಂಜಾ ನರಸಿಂಹಸ್ವಾಮಿ ರಥೋತ್ಸವ ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ನೆರವೇರಿತು. ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರೋ ಬಾಲರಾಜ್ಗೆ ಅಭಿಮಾನಿಗಳ ಶುಭಹಾರೈಕೆ ಸಿಕ್ಕಿದೆ.
ಅರ್ಥಾಥ್ ರಥೋತ್ಸವದ ವೇಳೆ ಬಾಳೆಹಣ್ಣಿನ ಮೇಲೆ ಬಾಲರಾಜ್ ಗೆ ಶುಭವಾಗಲಿ ಎಂದು ಬರೆದು ರಥಕ್ಕೆ ಎಸೆಯುವ ಮೂಲಕ ಶುಭ ಕೋರಿದ್ದಾರೆ. ಅಷ್ಟೆ ಅಲ್ಲದೇ ಚಾಮರಾಜನಗರ ಎಸ್.ಸಿ ಮೀಸಲು ಅಭ್ಯರ್ಥಿ ಬಾಲರಾಜ್ ಗೆ ಅಭಿಮಾನಿಗಳು ಮುಂದಿನ ಬಾರಿ ಎಂಪಿ ಆಗುವಂತೆ ಹರಕೆ ಹೊತ್ತಿದ್ದಾರೆ.


