Friday, September 12, 2025
25 C
Bengaluru
Google search engine
LIVE
ಮನೆ#Exclusive NewsTop Newsರಾಜಕೀಯಕ್ಕೆ ಮತ್ತೊಬ್ಬ ಹೀರೋಯಿನ್ ಎಂಟ್ರಿ?

ರಾಜಕೀಯಕ್ಕೆ ಮತ್ತೊಬ್ಬ ಹೀರೋಯಿನ್ ಎಂಟ್ರಿ?

ರಾಜಕೀಯ-ಕ್ರಿಕೆಟ್-ಸಿನಿಮಾ ನಂಟು ಹೊಸದೇನಲ್ಲ. ಕ್ರಿಕೆಟಿಗರು, ಸಿನಿಮಾ ಸ್ಟಾರ್​ಗಳು ರಾಜಕೀಯಕ್ಕೆ ಬರೋದು ಹೊಸತಲ್ಲ.. ಇದೀಗ ಅದಕ್ಕೆ ಮತ್ತೊಂದು ಹೆಸರು ಸೇರ್ಪಡೆ ಆಗುವಂತಿದೆ.

ಬಾಲಿವುಡ್-ಟಾಲಿವುಡ್​ನಲ್ಲಿ ಮಿಂಚಿರುವ ನಟಿ ನೇಹಾ ಶರ್ಮಾ ಇದೀಗ ಪಾಲಿಟಿಕ್ಸ್​ನಲ್ಲಿ ಇನ್ನಿಂಗ್ಸ್​ ಶುರು ಮಾಡಲು ತಯಾರಿ ನಡೆಸಿದ್ದಾರೆ. ಚಿರುತಾ ಸಿನಿಮಾ ಫೇಮ್ ನಟಿ ನೇಹಾ ಶರ್ಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಂಭವ ಇದೆ.

ಹೇಳಿಕೇಳಿ ನೇಹಾ ಶರ್ಮಾರದ್ದು ರಾಜಕೀಯ ಹಿನ್ನೆಲೆಯ ಕುಟುಂಬ. ಈಕೆಯ ತಂದೆ ಅಜಿತ್ ಶರ್ಮಾ.. ಕಾಂಗ್ರೆಸ್ ನಾಯಕರು.. ಬಿಹಾರದ ಭಗಲ್​ಪುರ ಕ್ಷೇತ್ರದಿಂದ ಈಗ ತಮ್ಮ ಪುತ್ರಿ ನೇಹಾ ಶರ್ಮಾಗೆ ಟಿಕೆಟ್ ಕೊಡಿಸಲು ಅಜಿತ್ ಶರ್ಮಾ ಪ್ರಯತ್ನ ಮಾಡ್ತಿದ್ದಾರೆ. ಈ ವಿಚಾರವನ್ನು ಅಜಿತ್ ಶರ್ಮಾ ಬಹಿರಂಗವಾಗಿಯೂ ಕೂಡ ಹೇಳಿದ್ದಾರೆ.

ಭಗಲ್ಪುರ.. ಕಾಂಗ್ರೆಸ್​ ಭದ್ರಕೋಟೆ. ಅಜಿತ್ ಶರ್ಮಾಗೂ ಒಳ್ಳೆಯ ಹಿಡಿತ ಇದೆ. ಪಕ್ಷ ಬಯಸಿದ್ರೆ ನಾನು ಸ್ಪರ್ಧೆ ಮಾಡ್ತೇನೆ.. ಇಲ್ಲ ಅಂದ್ರೆ ನನ್ನ ಮಗಳನ್ನು ನಿಲ್ಲಿಸ್ತೇನೆ.. ಈ ಬಗ್ಗೆ ಎರಡ್ಮೂರು ದಿನಗಳಲ್ಲಿ ನಿರ್ಣಯ ತಗೋತೇನೆ ಎಂದು ಅಜಿತ್ ಶರ್ಮಾ ತಿಳಿಸಿದ್ದಾರೆ.

ನೇಹಾ ಶರ್ಮಾ ತನ್ನ ಸಿನಿಮಾ ಕೆರಿಯರ್ ಅನ್ನು 2007ರಲ್ಲಿ ತೆಲುಗಿನಲ್ಲಿ ಬಂದ ರಾಮ್​ಚರಣ್ ನಟನೆಯ ಚಿತ್ರದ ಮೂಲಕ ಆರಂಭಿಸಿದ್ರು. ಇದು ದೊಡ್ಡ ಗೆಲುವನ್ನೇ ತಂದುಕೊಟ್ಟಿತ್ತು.

2010ರಲ್ಲಿ ಕ್ರೂಕ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ರು. 2020ರಲ್ಲಿ ಬಂದ ತನ್ಹಾಜಿ ಸಿನಿಮಾ ಸಕ್ಸಸ್ ಆಗಿತ್ತು.

17 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದರೂ ನೇಹಾ ಶರ್ಮಾಗೆ ಸಿಕ್ಕಿದ್ದು ಮೂರು ಹಿಟ್ ಮಾತ್ರ.. ಆದರೂ,ಹಲವು ವೆಬ್ ಸಿರೀಸ್​ಗಳಲ್ಲಿ ನಟಿಸಿರುವ ನೇಹಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿ ಇರುತ್ತಾರೆ.

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments