ಹುಬ್ಬಳ್ಳಿ : ಲೋಕಸಭಾ ಚುನಾವಣೆ ಕಾವು ದಿನ ಕಳೆದಂತೆ ರಂಗು ಪಡೆದುಕೊಳ್ಳುತ್ತಿದೆ. ಕೇಂದ್ರದ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ INDIA ಒಕ್ಕೂಟದ ಮೊರೆ ಹೋಗಿದ್ದು, ಅದೇ ರೀತಿ ಬಿಜೆಪಿ ಎನ್ಡಿಎ ಮೈತ್ರಿಕೂಟ ಮಾಡಿಕೊಂಡಿದೆ. ಎರಡು ರಾಷ್ಟ್ರೀಯ ಪಕ್ಷಗಳು ಆಯಾ ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಆದರೆ ಎನ್ಡಿಎ ಒಕ್ಕೂಟದಲ್ಲಿರುವ ಜೆಡಿಎಸ್ ಬಿಜೆಪಿ ಮೈತ್ರಿ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಕಾಣದಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ 5ನೇ ಬಾರಿಗೆ ಹಾಲಿ ಸಂಸದ ಪ್ರಹ್ಲಾದ್ ಜೋಶಿಯವರನ್ನು ಕಣಕ್ಕೆ ಇಳಿಸಿದೆ. ಈಗಾಗಲೇ ಪ್ರಹ್ಲಾದ್ ಜೋಶಿಯವರು ಕ್ಷೇತ್ರದಲ್ಲಿ ಚುನಾವಣಾ ತಯಾರಿಯಲ್ಲಿ ಬ್ಯೂಸಿಯಾಗಿದ್ದಾರೆ. ಪಕ್ಷದ ಕಚೇರಿ ಸೇರಿದಂತೆ ಚುನಾವಣಾ ಕಾರ್ಯಾಲಯದಲ್ಲಿ ಸ್ವಪಕ್ಷೀಯರ ಸಭೆ ಮಾಡುತ್ತಿದ್ಧು, ಕ್ಷೇತ್ರದಲ್ಲಿ ಜಿಜೆಪಿ ಅರ್ಭ್ಯರ್ಥಿ ಮಿಂಚಿನ ಓಡಾಟ ನಡೆಸಿದ್ದಾರೆ. ಆದರೆ ಜೆಡಿಎಸ್ ನಾಯಕರೊಂದಿಗೆ ಇದುವರೆಗೂ ಪ್ರಹ್ಲಾದ್ ಜೋಶಿಯವರು ಕಾಣಿಸಿಕೊಳ್ಳದೆ ಇರುವುದು ಎನ್ ಡಿಎ ಮೈತ್ರಿ ಪಕ್ಷದ ಜೆಡಿಎಸ್ ಜಿಲ್ಲಾ ನಾಯಕರೊಂದಿಗೆ ಒಮ್ಮೆಯು ಕಾಣಿಸಿಕೊಂಡಿಲ್ಲ.
ಧಾರವಾಡ ಜಿಲ್ಲೆಯ ಜೆಡಿಎಸ್ ನಾಯಕರು ಇತ್ತೀಚೆಗೆ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿ, ಪ್ರಹ್ಲಾದ್ ಜೋಶಿಯರಿಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಿದ ಪ್ರಮುಖರು, ಬಿಜೆಪಿ ಅಭ್ಯರ್ಥಿಗೆ ಬೆಂಬಲದೊಂದಿಗೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಮುಖರು, ಬಿಜೆಪಿ ಅಭ್ಯರ್ಥಿಗೆ ಬೆಂಬಲದೊಂದಿಗೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಕುರಿತು ತೀರ್ಮಾನ ಕೈಗೊಂಡಿದ್ದಾರೆ.
ಇಷ್ಟೆಲ್ಲಾ ನಡೆದ್ರೂ ಕೂಡಾ ಬಿಜೆಪಿಯ ಧಾರವಾಡದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಮಾತ್ರಾ, ಜೆಡಿಎಸ್ ನಾಯಕರೊಂದಿಗೆ ಒಮ್ಮೆಯೂ ಕಾಣಿಸಿಕೊಳ್ಳದೆ ಇರುವುದು, ಮೈತ್ರಿ ಪಕ್ಷದ ನಾಯಕರಿಗೆ ಇರಿಸುಮುರಿಸು ತಂದೊಡ್ಡಿದೆ.
ಒಟ್ಟಿನಲ್ಲಿ ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈಗ ಲೋಕ ಅಖಾಡಾ ರಂಗು ಪಡೆದುಕೊಳ್ಳುತ್ತಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಚುನಾವಣೆಯ ತಯಾರಿ ಹಾಗೂ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಆದರೆ ಎನ್ ಡಿ ಎ ಒಕ್ಕೂಟಕ್ಕೆ ಸೇರ್ಪಡೆಗೊಂಡ ಜೆಡಿಎಸ್ ನ ಧಾರವಾಡ ಜಿಲ್ಲಾ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಅಂತರ ಹಾಗೇ ಇದೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿಯ ಫೈನಲ್ ಆದ ಬಳಿಕ ಹೇಗೆ ವಾತಾವರಣ ಬದಲಾಗುತ್ತೋ ಕಾದು ನೋಡಬೇಕು ಎಂದು ಹೇಳಿದರು.