ಆನೇಕಲ್ : ಜೂಜಿನ ಚಟಕ್ಕಾಗಿ ಹಣ ಸಂಗ್ರಹಿಸಲು ಹೋಗಿ ಯುವಕನೋರ್ವ ಪೊಲೀಸರ ಅತಿಥಿಯಾದ ಘಟನೆ ಆನೇಕಲ್ನಲ್ಲಿ ಜರುಗಿದೆ. ದುಡ್ಡಿಗಾಗಿ ತಲೆ ಮೇಲೆ ಟೊಮೇಟೋ ಕೆಚಪ್ ಸುರಿದುಕೊಂಡು, ತನ್ನ ಚಿಕ್ಕಮ್ಮನಿಗೆ ಕಿಡ್ನ್ಯಾಪ್ ಆಗಿದ್ದೀನಿ ಎಂದು ಹೇಳಿ ಹಣ ಪಡೆದ್ದಿ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾರ್ಚ್ 11 ರ ರಾತ್ರಿ ಜೀವನ್ ಅದೇ ಆಕ್ಸ್‌ಫರ್ಡ್ಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಚಿಕ್ಕಮ್ಮ ಸುನಂದ ಅವರಿಗೆ ಫೋಟೊಸ್ ಕಳಿಸಿದ್ದ.
ನಂತರ ಫೋನ್ ಮಾಡಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಹಣಕ್ಕಾಗಿ ಹೊಡೆಯುತ್ತಿದ್ದಾರೆ 20 ಸಾವಿರ ರೂ. ಹಣವನ್ನು ಅಕೌಂಟ್‌ಗೆ ಹಾಕಿಸಿಕೊಂಡಿದ್ದ. ಮಗ ಕಿಡ್ನ್ಯಾಪ್ ಆಗಿದ್ದಾನೆ ಎಂದು ಆತಂಕಗೊಂಡ ಸುನಂದ, ಕೂಡಲೇ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ತನಿಖೆಗಿಳಿದ ಪೊಲೀಸರು ಜೀವನ್‌ನನ್ನು ಪತ್ತೆ ಮಾಡಿ ಕರೆ ತಂದಿದ್ದರು. ವಿಚಾರಣೆ ಮಾಡಿದಾಗ, ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಜೀವನ್ ಕಿಡ್ನ್ಯಾಪ್ ನಾಟಕವಾಡಿದ್ದ ಎಂದು ಬೆಳಕಿಗೆ ಬಂದಿದೆ. ಗೋಲ್ಡ್ 369 ಎಂಬ ಆನ್‌ಲೈನ್ ಆ್ಯಪ್‌ನಲ್ಲಿ ಜೂಜಾಡಿ ಜೀವನ್ ಹಣವನ್ನು ಕಳೆದುಕೊಂಡಿದ್ದ.
ಮತ್ತೆ ಜೂಜಾಡಲು ಹಣವಿಲ್ಲದಿದ್ದಾಗ ಗೆಳೆಯರೊಂದಿಗೆ ಸೇರಿ ಕಿಡ್ನ್ಯಾಪ್ ಆಗಿದ್ದೇನೆಂದು ನಾಟಕವಾಡಿದ್ದ. ಆನೇಕಲ್‌ನ ಬಿಂಗಿಪುರ ಮನೆಯೊಂದರಲ್ಲಿ ಆನ್‌ಲೈನ್‌ನಲ್ಲಿ ಜೂಜಾಡುತ್ತಿದ್ದಾಗಲೇ ಪೊಲೀಸರು ದಾಳಿ ಮಾಡಿದ್ದಾರೆ.ಆರೋಪಿ ಜೀವನ್ ಸೇರಿ ಸಹಕಾರ ಕೊಟ್ಟ ವಿನಯ್, ಪೂರ್ಣೇಶ್, ಪ್ರೀತಮ್ ಹಾಗೂ ರಾಜು ಎಂಬುವವರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ತಿಳಿಸಿದ್ದಾರೆ