ತುಮಕೂರು : ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೆ. ಎನ್ ರಾಜಣ್ಣನವರು ಬಿಜೆಪಿಯವರದು ಗೂಡ್ಸೆ ಹಿಂದೂ ತತ್ವ. ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಅಷ್ಟೇ ಅವರದು ಎಂದು ಹೇಳಿದರು.
ಮಹಾಲಿಂಗಪ್ಪನವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಹಸಿವಿನ ಬೇಲೆ ಯಾರಿಗೆ ಗೊತ್ತಿರುತ್ತದೆಯೋ ಅವರು ಮಾತ್ರ ಇಂತಹ ಕಾರ್ಯಕ್ರಮಗಳು ಮಾಡಲು ಸಾಧ್ಯ. ನಮ್ಮ ಐದು ಗ್ಯಾರಂಟಿಗಳಿಂದ ಹಳ್ಳಿಗಳಲ್ಲಿರುವ ಬಡವರಿಗೆ ಆರ್ಥಿಕವಾಗಿ ಸಹಾಯಕವಾಗಿದೆ.
ಈ ಹಿಂದೆ ಭಿಕ್ಷುಕರ ಸಂಖ್ಯೆ ಹೆಚ್ಚಾಗಿತ್ತು ಆದರೆ ಈಗ ಹಾಗಿಲ್ಲ ಅವರ ಸಂಖ್ಯೆ ಬಹಳ ಕಡಿಮೆಯಾಗಿದೆ ಅದಕ್ಕೆ ಮುಖ್ಯ ಕಾರಣ ಅನ್ನ ಭಾಗ್ಯ ಯೋಜನೆಯಾಗಿದೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ರೂಪಾಯಿ ಉಚಿತ ಸಿಗುತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಹಣ ಬಳಸಿ. ಅದನ್ನು ದುರುಪೋಯೋಗ ಮಾಡಿಕೊಳ್ಳಬೇಡಿ ಎಂದರು.
ಜನತಾದಳವು ಜಾತ್ಯಾತೀತ ವಾಗಿ ಹೆಸರು ಇಟ್ಟಿದ್ದಾರೆ ಜಾತಿಯತೆ ಮಾಡುವುದೇ ಇವರ ಕೆಲಸ. ಜೆಡಿಎಸ್ ಮುಳುಗುತ್ತಿರುವ ಹಡಗು. ನನಗೆ ವಿಷ ಕೊಟ್ಟರೂ ಎಂದು ಆರೋಪ ಮಾಡಿದ್ದಾರೆ ದೇವೆಗೌಡರು ನಾನು ಅವರಿಗೆ ಸೋಲಿಸಿಲ್ಲ ಆದರೆ ನಾನು ಅವರನ್ನು ವಿರೋದ ಮಾಡಿದ್ದೇನೆ ಅಷ್ಟೇ ಎಂದು ಹೇಳಿದರು.
ಬಿಜೆಪಿಯವರದು ಗೂಡ್ಸೆ ಹಿಂದೂ ತತ್ವ. ಹಿಂದುತ್ವದಲ್ಲಿ ಎರಡು ಬಗೆ ಇದೆ ಒಂದು ಗಾಂಧಿ ತತ್ವ ಹಿಂದೂ. ಇನ್ನೊಂದು ಗೂಡ್ಸೆ ಹಿಂದೂ ತತ್ವ ನಮ್ಮದು ಗಾಂದಿ ಹಿಂದೂಗಳು ನಾವು. ಬಿಜೆಪಿ ಯವರದು ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಅಷ್ಟೇ ಎಂದರು.