Tuesday, January 27, 2026
24 C
Bengaluru
Google search engine
LIVE
ಮನೆರಾಜ್ಯಐತಿಹಾಸಿಕ ರಥಕ್ಕೆ ಬೆಂಕಿ ಹಚ್ಚಿದವನು ಮುಸ್ಲಿಂ ಅಲ್ಲ..!

ಐತಿಹಾಸಿಕ ರಥಕ್ಕೆ ಬೆಂಕಿ ಹಚ್ಚಿದವನು ಮುಸ್ಲಿಂ ಅಲ್ಲ..!

ತುಮಕೂರು : ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ಪುರದಲ್ಲಿ 800 ವರ್ಷದ ಪ್ರಾಚೀನ ಚೋಳರ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟು ಹಾಕಿದರು.ಇದು ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಾಲಯವಾಗಿದ್ದು, ಇದರ ವಾರ್ಷಿಕ ಜಾತ್ರೆಯು ಮಾರ್ಚ್ 20 ರಿಂದ ಪ್ರಾರಂಭ ಆಗಲಿಕ್ಕಿತ್ತು. ಊರಿನವರು ಜಾತ್ರೆಗೆ ತಯಾರಿ ನಡೆಸುವ ಮೊದಲೇ ಈ ಘಟನೆ ನಡೆದಿದೆ.

ಈ ಘಟನೆಯ ಸಂಬಂಧ ಉತ್ತರ ಭಾರತದ ಓರ್ವ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.ಈ ಘಟನೆ ಅತ್ಯಂತ ಗಂಭೀರವಾಗಿದ್ದು, ಕೂಡಲೇ ಇದರ ಹಿಂದಿನ ಅಪರಾಧಿಗಳು ಯಾರು ? ಯಾವ ಉದ್ದೇಶಕ್ಕೆ ಈ ಕೃತ್ಯ ಎಸೆಗಲಾಗಿದೆ? ಇದರ ಹಿಂದಿನ ಷಡ್ಯಂತ್ರ್ಯ ಏನು‌ ಎಂಬುದನ್ನು ಪತ್ತೆ ಹಚ್ಚಬೇಕು. ಕೂಡಲೇ ಅಪರಾಧಿಗಳನ್ನು ಬಂಧನ ಮಾಡಬೇಕು. ಸರಕಾರವು ಹಿಂದೂ ದೇವಸ್ಥಾನಗಳಿಂದ ತೆರಿಗೆ‌ ಸಂಗ್ರಹ ಮಾಡುತ್ತದೆ ಆದರೆ‌ ಸರಕಾರವು ದೇವಸ್ಥಾನಗಳ ಸುರಕ್ಷತೆಯನ್ನು ಮಾಡುವುದಿಲ್ಲ. ಇದು ಅತ್ಯಂತ ಖಂಡನೀಯವಾಗಿದೆ. ದೇವಸ್ಥಾನದ ಜಾತ್ರೆಗೆ ಸುರಕ್ಷತೆ ನೀಡಬೇಕು’ ಎಂದು ದೇವಸ್ಥಾನಗಳ ಮಹಾಸಂಘವು ಆಗ್ರಹಿಸುತ್ತದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments