ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ,ಎರಡು ಬಾರಿ ಈಜಿಪುರ ವಾರ್ಡ್ ಕಾರ್ಪೊರೇಟರ್ ಆಗಿದ್ದ, ಟಿ.ರಾಮಚಂದ್ರಪ್ಪ ತೀವ್ರ ಅನಾರೋಗ್ಯ ಹಿನ್ನೆಲೆ ಕಳೆದ ರಾತ್ರಿ ನಿಧನರಾಗಿದ್ದಾರೆ.
೬೧ ವರ್ಷದ ಟಿ.ರಾಮಚಂದ್ರಪ್ಪ ಮೂರು ಜನ ಮಕ್ಕಳನ್ನ ಅಗಲಿದ್ದಾರೆ,ಕುಟುಂಬದ ಊರವರ ದುಃಖ ಹೆಚ್ಚಿಸಿದೆ ,ಕಾರ್ಪೊರೇಟರ್ ಆದ ಅಲ್ಪಾವಧಿಯಲ್ಲೇ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಮೃತ ಟಿ.ರಾಮಚಂದ್ರಪ್ಪ. ಎಲ್ಲಾ ವರ್ಗದ ಜನರೊಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದರು,ಜನಪರ ಕಾಳಜಿ ಮತ್ತು ಅವರಲ್ಲಿನ ಕಾರ್ಯ ಕ್ಷಮತೆಯನ್ನ ನೆನೆದು ಬಂಧು ಮಿತ್ರರು ಕಣ್ಣೀರಿಡುತ್ತಿದ್ದಾರೆ. ಪಕ್ಷದ ಅನೇಕ ಮುಖಂಡರು ಭೇಟಿ ಕೊಟ್ಟು ಮೃತ ಟಿ.ರಾಮಚಂದ್ರಪ್ಪರಿಗೆ ಶ್ರದ್ದಾಂಜಲಿ ಅರ್ಪಿಸಿದರು.