ಸಿನಿಮಾಸುದ್ದಿ

ತಾಯಿಯಾದ 777 ಚಾರ್ಲಿ, 6 ಮರಿಗಳಿಗೆ ಜನ್ಮ : ಖುಷಿ ಹಂಚಿಕೊಂಡ ರಕ್ಷಿತ್ ಶೆಟ್ಟಿ!

ಸ್ಯಾಂಡಲ್​ವುಡ್ ನಟ ರಕ್ಷಿತ್ ಶೆಟ್ಟಿ ಅಭಿನಯದ -777 ಚಾರ್ಲಿ ಸಿನಿಮಾ ಸೂಪರ್​ ಹಿಟ್ ಆಗಿತ್ತು. 2022ರ ಜೂನ್​ 10ರಂದು ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ ಪರ ಭಾಷೆಗಳಲ್ಲೂ ಸಖತ್ ಸದ್ದು ಮಾಡಿತ್ತು. ಧರ್ಮ ಹಾಗೂ ಚಾರ್ಲಿ ನಡುವಿನ ಪ್ರೀತಿ ಹಾಗೂ ಬಂಧ ಕಂಡು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕಣ್ಣೀರು ಹಾಕಿದ್ರು. ಮನಮುಟ್ಟುವ ಕಥೆಯನ್ನು ತೆರೆ ಮೇಲೆ ತಂದ ರಕ್ಷಿತ್ ಅಂಡ್ ಟೀಮ್​ ಗೆದ್ದು ಬೀಗಿತ್ತು. ​ ಸಿನಿಮಾ ಬಳಿಕ ಚಾರ್ಲಿ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಪ್ರೇಕ್ಷಕರ ಮನಗೆದ್ದ ಮುದ್ದಿನ ನಾಯಿ ಚಾರ್ಲಿ ಇದೀಗ ಗುಡ್ ನ್ಯೂಸ್ ನೀಡಿದೆ.

ಚಾರ್ಲಿ ನೋಡಲು ಮೈಸೂರಿ ಓಡೋಡಿ ಬಂದ ರಕ್ಷಿತ್ ಶೆಟ್ಟಿ

ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುವ ನಟ ರಕ್ಷಿತ್ ಶೆಟ್ಟಿ ಮುದ್ದಿನ ಚಾರ್ಲಿ ಹಾಗೂ ಮರಿಗಳನ್ನು ನೋಡಲು  ಮೈಸೂರಿಗೆ ಓಡೋಡಿ ಬಂದಿದ್ದಾರೆ. ಚಾರ್ಲಿ ಜೊತೆ ಕೆಲ ಕಾಲ ಕಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟ ರಕ್ಷಿತ್ ಶೆಟ್ಟಿ ಲೈವ್ ಬಂದು ಅಭಿಮಾನಿಗಳ ಜೊತೆ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.

ಲೈವ್​ ಬಂದು ಖುಷಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಖುಷಿ ಹಂಚಿಕೊಂಡ್ರು. ಲೈವ್​ ಬರಲು ಒಂದು ಕಾರಣ ಕೂಡ ಇದೆ. 777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ  2 ವರ್ಷ ಕಳೆದಿದೆ. ಸಿನಿಮಾವನ್ನು ಜನ ತುಂಬಾ ಇಷ್ಟಪಟ್ರು. ಸಿನಿಮಾ ಬಿಡುಗಡೆ ಆಗಿ ಇಷ್ಟು ಸಮಯ ಆದರೂ ನಮ್ಮ ಮನದಲ್ಲಿ ಒಂದು ವಿಚಾರ ಇತ್ತು. ಒಂದು ವೇಳೆ ಚಾರ್ಲಿ ತಾಯಿಯಾದ್ರೆ ಈ ಜರ್ನಿಗೆ ​ ಪೂರ್ಣ ಆಗುತ್ತೆ. ಈ ವಿಚಾರವನ್ನು ನಿರ್ದೇಶಕ ಕಿರಣ್​ ರಾಜ್​ ಅವರು ಮೊದಲೇ ಹೇಳಿದ್ದರು. ಅದನ್ನು ಕೇಳಿದ ಬಳಿಕ ಚಾರ್ಲಿ ತಾಯಿ ಆಗಬೇಕು ಅಂತ ನಾನು ಕೂಡ ಕಾದಿದ್ದೆ. ಪ್ರಮೋದ್​​ ಅವರಿಗೆ ಆಗಾಗ ಫೋನ್ ಮಾಡಿ  ನಾನು ವಿಚಾರಿಸುತ್ತಲೇ ಇದ್ದೆ. ಪ್ರಮೋದ್ ಕೂಡ ಚಾರ್ಲಿಗೆ ವಯಸ್ಸಾಯ್ತು ಸಾಧ್ಯತೆ ಕಡಿಮೆ ಎನ್ನುತ್ತಿದ್ರು. ಕೊನೆಗೂ ನಮಗೆ ಗುಡ್ ನ್ಯೂಸ್​ ಸಿಕ್ಕಿದೆ  ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ.

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ!

ನಾವು ಚಾರ್ಲಿ ಮರಿಗಳಿಗೆ ಜನ್ಮ ನೀಡುವ ದಿನಕ್ಕಾಗಿಯೇ ಕಾಯ್ತಿದ್ವಿ. ಅಚ್ಚರಿ ಎಂಬಂತೆ ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ.  ಸುದ್ದಿ ತಿಳಿಯುತ್ತಿದ್ದಂತೆ ನಾನು, ಚಾರ್ಲಿ ಮತ್ತು  ಮರಿಗಳನ್ನು ನೋಡಲು ನಾನು ಮೈಸೂರಿಗೆ ಬಂದಿದ್ದೇನೆ ಎಂದು ನಟ ರಕ್ಷಿತ್​ ಶೆಟ್ಟಿ ಹೇಳಿದ್ರು. ರಕ್ಷಿತ್​ ಶೆಟ್ಟಿ ಅವರು ​ ಲೈವ್​ನಲ್ಲಿ ಅಭಿಮಾನಿಗಳಿಗೆ ಚಾರ್ಲಿ ಮತ್ತು ಅದರ ಮರಿಗಳನ್ನು  ತೋರಿಸಿದ್ದಾರೆ. 6 ಮರಿಗಳ ಪೈಕಿ 5 ಹೆಣ್ಣು ನಾಯಿ ಮರಿ ಹಾಗೂ 1 ಗಂಡು ನಾಯಿ ಮರಿ ಎಂದು ಹೇಳಿದ್ರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

 

 

Comments (0)

Your email address will not be published. Required fields are marked *

Back to top button