SportsTop Newsಕ್ರಿಕೆಟ್ಜನಸಾಮಾನ್ಯರ ದನಿಫ್ರೀಡಂ ಟಿವಿ ವಿಶೇಷ

7 ತಿಂಗಳ ನಂತರ ಭಾರತಕ್ಕೆ ಮರಳುತ್ತಿರುವ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ!

ಬಾಲಿವುಡ್ ನಟಿ ಹಾಗೂ ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಳೆದ 7 ತಿಂಗಳಿಂದ ಲಂಡನ್ ನಲ್ಲಿದ್ದಾರೆ. ಮಗ ಅಕಾಯ್ ಜನಿಸಿದ ನಂತರ, ನಟಿ ಮಗಳು ವಾಮಿಕಾ ಅವರೊಂದಿಗೆ ಲಂಡನ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಅವರ ಜೊತೆಗಿದ್ದು, ಕುಟುಂಬದ ಸಮಯವನ್ನು ಆನಂದಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ವಿರಾಟ್ ಟಿ-20 ವಿಶ್ವಕಪ್ ಗೆದ್ದು ಮತ್ತೆ ಲಂಡನ್‌ಗೆ ತೆರಳಿದಾಗ ಇಬ್ಬರೂ ಈಗ ಲಂಡನ್‌ಗೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿವೆ. ಆದರೆ, ಈ ವಿಚಾರದಲ್ಲಿ ಇಬ್ಬರೂ ಮೌನ ವಹಿಸಿದ್ದರು.ಇದೀಗ ನಟಿ ತನ್ನ ದೇಶಕ್ಕೆ ಮರಳುವ ಬಗ್ಗೆ ಸುಳಿವು ನೀಡಿದ್ದು,ಅದರ ನಂತರ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ.

ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಈ ತಾರಾ ಜೋಡಿ ಕಳೆದ 7 ತಿಂಗಳಿಂದ ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿದ್ದಾರೆ. ಕೆಲವೊಮ್ಮೆ ಅವರು ಲಂಡನ್‌ನ ಬೀದಿಗಳಲ್ಲಿ ಸುತ್ತಾಡುತ್ತಾ ಕುಟುಂಬದ ಜೊತೆಗೇ ಬ್ಯುಸಿಯಾಗಿದ್ದರು. ಇದೀಗ ಅನುಷ್ಕಾ ತಮ್ಮ ದೇಶಕ್ಕೆ ಮರಳುವ ಸುಳಿವು ನೀಡಿದ್ದಾರೆ.

Comments (0)

Your email address will not be published. Required fields are marked *

Back to top button