ಬೆಂಗಳೂರು: ನಗರದಲ್ಲಿ ಗಾಡಹಗಲೇ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಕಾರ್ ಕೊಟ್ಟಿದ್ದವ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೋಡೆಗೆ ಬಳಸಿದ್ದ ಇನ್ನೋವಾ ಕಾರನ್ನು ಕೊಟ್ಟವರನ್ನು ಲಾಕ್ ಮಾಡಿದ್ದಾರೆ. ಇನ್ನೋವಾ ಕಾರು ನೀಡಿದ್ದ ಇಬ್ಬರೂ ಗೋವಿಂದಪುರದವರು ಅನ್ನೋದು ಪತ್ತೆಯಾಗಿದೆ. ಚಿತ್ತೂರು ಗುಡಿಪಲ್ಲಿ ಬಳಿ ಇನ್ನೋವಾ ಕಾರು ಪತ್ತೆಯಾಗಿತ್ತು. ಕಾರಿನ ಎಂಜಿನ್‌ನ ಚಾಸಿಸ್ ನಂಬರ್ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದು ಚಾಸಿಸ್ ನಂಬರ್ ಆಧಾರದ ಮೇಲೆ ಮೂಲ ಮಾಲೀಕನ ಪತ್ತೆ ಮಾಡಿ ವಿಚಾರಿಸಿದಾಗ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಅಲ್ಲದೇ ದರೋಡೆಕೋರರು ಚಿತ್ತೂರು ಮೂಲದವ್ರು ಅನ್ನೋದು ಬಹಿರಂಗವಾಗಿದೆ.
ನವೆಂಬರ್ 19 ಮಟಮಟ ಮಧ್ಯಾಹ್ನ. ಡೈರಿ ಸರ್ಕಲ್ ಫ್ಲೈಓವರ್ ಮೇಲೆ ನಡೆದ ಸಿನಿಮೀಯ ಶೈಲಿಯ ದರೋಡೆಗೆ ಬೆಂಗಳೂರೇ ಬೆಚ್ಚಿಬಿದ್ದಿದೆ. ದರೋಡೆಕೋರರು ಪೊಲೀಸರ ಕಣ್ತಪ್ಪಿಸಲು ಹಲವು ರೀತಿಯ ಮಾಸ್ಟರ್ ಪ್ಲ್ಯಾನ್ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.


